Site icon PowerTV

ಕರಾವಳಿಯಲ್ಲಿ ಮತ್ತೆ ಹರಿಯಿತು ನೆತ್ತರು ಕೋಡಿ

ಮಂಗಳೂರು : ಮಂಗಳವಾರ ಪ್ರವೀಣ್​ ನೆಟ್ಟಾರು ಹತ್ಯೆಯಾಗಿದ್ದು, ಗುರುವಾರ ಫಾಜಿಲ್​​ನನ್ನು ಹಂತಕರು ಬರ್ಬರ ಹತ್ಯೆ ಮಾಡಿದ್ದಾರೆ.

ಎರಡು ದಿನಗಳ ಅಂತರದಲ್ಲೇ ಇಬ್ಬರ ಬರ್ಬರ ಹತ್ಯೆ ನಡೆದಿದ್ದು, ಕರಾವಳಿ ಜನರು ಬೆಚ್ಚಿಬಿದ್ದಿದ್ದಾರೆ. ಸುರತ್ಕಲ್‌ನ ಮಂಗಳಪಾದೆಯಲ್ಲಿ ಯುವಕನ ಬರ್ಬರ ಹತ್ಯೆ ನಡೆದಿದ್ದು, CCTVಯಲ್ಲಿ ಮಾರಣಾಂತಿಕ ಹಲ್ಲೆಯ ದೃಶ್ಯ ಸೆರೆಯಾಗಿದೆ.
ಇನ್ನು,

ಬಟ್ಟೆ ಅಂಗಡಿಗೆ ನುಗ್ಗಿ ಫಾಜಿಲ್‌ ಎಂಬಾತನ ಮೇಲೆ ಅಟ್ಯಾಕ್‌ ಆಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಾಗೆನೇ ಸುರತ್ಕಲ್, ಪಣಂಬೂರು, ಮುಲ್ಕಿ, ಬಜ್ಪೆ ಠಾಣೆಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದೆ.

Exit mobile version