Site icon PowerTV

ತುಂಗಭದ್ರಾ ನದಿಯಲ್ಲಿ ಮತ್ತೆ ಪ್ರವಾಹ ಭೀತಿ ಆತಂಕ

ಕೊಪ್ಪಳ : ಜಲಾಶಯದಿಂದ ಈಗ ಒಂದು‌ ಲಕ್ಷ ಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಹೀಗಾಗಿ ತುಂಗಭದ್ರಾ ನದಿಯಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.

ಜಲಾಶಯದಿಂದ ಈಗ ಒಂದು‌ ಲಕ್ಷ ಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ 72653 ಕ್ಯೂಸೆಕ್ ನೀರಿ ಒಳಹರಿವು ಇದೆ, ಹೀಗಾಗಿ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಇನ್ನು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇರೋ ಸಮಾಧಿ ಮಂಟಪ. ನವಬೃಂದಾವನ‌ ಗಡ್ಡೆ ಸಂಪೂರ್ಣ ಜಲಾವೃತವಾಗಿದ್ದು, ಅಪಾರ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಮತ್ತೆ ಗಂಗಾವತಿ ಕಂಪ್ಲಿ ಸೇತುವೆ ಮುಳಗುವ ಸಾಧ್ಯತೆ ಇದೆ.

Exit mobile version