Site icon PowerTV

ಲವ್ವರ್​ಗಾಗಿ ಮೊಬೈಲ್ ಕಳ್ಳತನ ಮಾಡಿದ ಭೂಪ

ಬೆಂಗಳೂರು : ಲವ್ವರ್​ಗಾಗಿ ಮೊಬೈಲ್ ಕಳ್ಳತನ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಜುಲೈ 22 ರಂದು ಜೆಪಿ ನಗರದ ಕ್ರೋಮಾ ಮೊಬೈಲ್ ಶಾಪ್ ನಲ್ಲಿ ಈ ಘಟನೆ ನಡೆದಿದ್ದು, ಸಂಜೆ ಟೈಮಲ್ಲಿ ಮೊಬೈಲ್ ಶಾಪ್ ಗೆ ಗ್ರಾಹಕನಂತೆ ಹೋಗಿದ್ದ. ಮೊಬೈಲ್ ನೋಡ್ತಾ ನೋಡ್ತಾ ಟಾಯ್ಲೆಟ್ ಸೇರ್ಕೊಂಡ ಅವನು ಮೊಬೈಲ್ ಶಾಪ್ ಕ್ಲೋಸ್ ಆಗ್ತಿದ್ದಂತೆ ಲಕ್ಷ ಲಕ್ಷ ಬೆಲೆಬಾಳೋ ಮೊಬೈಲ್ ಕದ್ದಿದ್ದಾನೆ.

ಅದಲ್ಲದೇ, ಬೆಳಿಗ್ಗೆ ಮೊಬೈಲ್ ಶಾಪ್ ತೆರೆಯುವವರೆಗೂ ಅಂಗಡಿಯಲ್ಲೇ ಟೆಂಟಾಕಿದ್ದ ಕಳ್ಳ. ಶಾಪ್ ಓಪನ್ ಮಾಡ್ತಿದ್ದಂತೆ ಇನ್ನೊಂದು ಬಾಗಿಲಿನಿಂದ ಕಳ್ಳ ಎಸ್ಕೇಪ್ ಆಗಿದ್ದಾನೆ. ಸದ್ಯ ಜೆಪಿ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version