Site icon PowerTV

ಸಿಎಂ ಬೊಮ್ಮಾಯಿ ಮಧ್ಯರಾತ್ರಿ ದಿಢೀರ್​​​ ಸುದ್ದಿಗೋಷ್ಠಿ ಕರೆದಿದ್ದೇಕೆ..?

ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ತಡರಾತ್ರಿ 12:15ಕ್ಕೆ ತುರ್ತು ಸುದ್ಧಿಗೋಷ್ಠಿಯನ್ನು ಕರೆದು ಇಂದು ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟೂರು ಹತ್ಯೆ ಹಿನ್ನೆಲೆ ಇಂದು ದೊಡ್ಡ ಬಳ್ಳಾಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಒಂದು ವರ್ಷ ಸಾಧನಾ ಸಮಾವೇಶವನ್ನು ಅಧಿಕೃತವಾಗಿ ರದ್ದು ಮಾಡಲಾಗಿದೆ ಎಂದು ತಿಳಿಸಿದರು.

ಅಲ್ಲದೇ, ವಿಧಾನಸೌಧದಲ್ಲಿ ನಡೆಯಬೇಕಿದ್ದ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ನಮ್ಮ ಕಾರ್ಯಕರ್ತರು ಕಷ್ಟಕಾಲದಲ್ಲಿ ಜೊತೆಗೆ ಇದ್ದಾರೆ. ಹೀಗಾಗಿ ನಾನು ಕಾರ್ಯಕರ್ತರಲ್ಲಿ ಕ್ಷಮೆ ಕೇಳುತ್ತೇನೆಂದು ತಿಳಿಸಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್​​, ರಾಜಾಧ್ಯಕ್ಷ ನಳೀನ್​​ ಕುಮಾರ್​​ ಕಟೀಲ್​​, ಸಚಿವ ಸಿ.ಸಿ. ಪಾಟೀಲ್​​, ಭಾಗಿಯಾಗಿದ್ದರು.

Exit mobile version