Site icon PowerTV

ಜನೋತ್ಸವ ಕಾರ್ಯಕ್ರಮ ಏಕಾಏಕಿ ರದ್ದು ಮಾಡಿದ್ದೇಕೆ ?

ದೊಡ್ಡಬಳ್ಳಾಪುರ : ಬೊಮ್ಮಾಯಿ ಸರ್ಕಾರದ ವಿರುದ್ಧ ಹೈಕಮಾಂಡ್ ಗರಂ ಆಗಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮುಖಂಡರು ರಾಜೀನಾಮೆ ನಿರ್ಧಾರ ಮಾಡಿದ್ದಾರೆ.

ಬೊಮ್ಮಾಯಿ 1 ವರ್ಷದ ಸಂಭ್ರಮ ಕಸಿದುಕೊಂಡಿದ್ಯಾರು ? ಸಿಎಂ ಬೊಮ್ಮಾಯಿ ಮಧ್ಯರಾತ್ರಿ ಸುದ್ದಿಗೋಷ್ಟಿ ನಡೆಸಿದ್ದೇಕೆ ? ಸಂಭ್ರಮಾಚರಣೆಗೆ ಪೂರಕ ವಾತಾವರಣವಿಲ್ಲ ಎಂಬ ಅರಿವಾಯ್ತಾ..? ಇದು ಬಿಜೆಪಿ ಕಾರ್ಯಕರ್ತರ ಆಕ್ರೋಶದ ಪರಿಣಾಮನಾ..? ಸಂಭ್ರಮಕ್ಕೆ ಸಿದ್ದವಾಗಿದ್ದ ಬಿಜೆಪಿಯಲ್ಲಿ ಈಗ ಎಲ್ಲಾ ಉಲ್ಟಾ ಪಲ್ಟಾ ಆಗಿದ್ದು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ, ಸ್ವತಃ ರಾಜ್ಯಾಧ್ಯಕ್ಷರಿಗೆ ಕಾರ್ಯಕರ್ತರ ರೋಷಾಗ್ನಿ ದರ್ಶನವಾಗಿದ್ದು, ಪ್ರವೀಣ್ ಕೊಲೆಗೆ ಬಿಜೆಪಿ ಕಾರ್ಯಕರ್ತರು ಕಿಡಿಕಾಡಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ಬಿಜೆಪಿ ಕಾರ್ಯಕರ್ತರ ಸರಣಿ ಕೊಲೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮುಖಂಡರು ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ರೆಡಿ ಎಂದ MLA . ಬೊಮ್ಮಾಯಿ ಸರ್ಕಾರದ ವಿರುದ್ಧ ಹೈಕಮಾಂಡ್ ಗರಂ ಆಗಿದೆ.

ಇನ್ನು, ಸಂಭ್ರಮಾಚರಣೆಗೆ ಹೊರಟಿದ್ದ ಬೊಮ್ಮಾಯಿಗೆ ಶಾಕ್​ ನೀಡಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಜನೋತ್ಸವ ರದ್ದುಗೊಳಿಸಿದ್ದಾರೆ.

Exit mobile version