Site icon PowerTV

ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ

ರಾಮನಗರ: ಐತಿಹಾಸಿಕ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿನ ಚಾಮುಂಡೇಶ್ವರಿ ತಾಯಿಗೆ ಇದೀಗ ಮಹಾಮಸ್ತಾಭಿಷೇಕ ನಡೆಸಲು ಸಕಲ ಸಿದ್ದತೆಯಾಗಿದ್ದು, ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಲಿದ್ದು, ಈಗಾಗಲೇ ವಿಶ್ವ ವಿಖ್ಯಾತಿ ಎಂದು ಹೆಸರು ಪಡೆದಿರುವ ಬೊಂಬೆನಗರಿಗೆ ಚನ್ನಪಟ್ಟಣಕ್ಕೆ ಮತ್ತೊಂದು ಗರಿ ಸಿಗುವುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಇದೇ ಜುಲೈ 31ರಂದು ಭಾನುವಾರ ಮಸ್ತಾಕಭಿಷೇಕ ನಡೆಸಲಾಗುತ್ತಿದ್ದು, ಚನ್ನಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಗೌಡಗೆರೆ ಚಾಮುಂಡೀಶ್ವರಿ ತಾಯಿಗೆ ಬಾಹುಬಲಿ ವಿಗ್ರಹಕ್ಕೆ ನಡೆದ ರೀತಿ ಮಹಾ ಮಸ್ತಕಾಭಿಷೇಕ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಸಜ್ಜಾಗಿದೆ. ಜುಲೈ 29 ರಂದು ಅಮ್ಮನವರ ಮೂಲಕ ವಿಗ್ರಹಕ್ಕೆ ಮಂಗಳ ಸ್ಥಾನ, ಅಭಿಷೇಕಕ್ಕೆ 36 ತರಹೇವಾರಿ 38 ಸಾವಿರ ಕೆಜಿಯ ವಿವಿಧ ಹಣ್ಣುಗಳು, ಹಾಲು,‌ ಮೊಸರು, ತುಪ್ಪ, ಪಂಚಾಮೃತ ನೈವೇದ್ಯ ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ.

ಇನ್ನೂ ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಚಾಲನೆ ನೀಡಲಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಡಾ.ಅಶ್ವತ್ಥ್‌ನಾರಾಯಣ್, ಸಂಸದ ಡಿ.ಕೆ.ಸುರೇಶ್ ಚಿತ್ರನಟ ಸುದೀಪ್, ಶಿವರಾಜ್ ಕುಮಾರ್ ಸೇರಿ ಹಲವು ಸಚಿವರು ಹಾಗೂ ಶಾಸಕರು ಸೇರಿ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಒಟ್ಟಾರೆ ಇದೇ ಪ್ರಪ್ರಥಮ ಬಾರಿಗೆ ವಿಶ್ವ ವಿಖ್ಯಾತ ಐತಿಹಾಸಿಕ ಗೌಡಗೆರೆಯ ಬೃಹತ್ ಚಾಮುಂಡೇಶ್ವರಿ ವಿಗ್ರಹಕ್ಕೆ ಮಹಾಮಸ್ತಾಭಿಷೇಕ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ಭಕ್ತರು ಸಹ ಕಾತುರದಿಂದ ಕಾಯುತ್ತಿದ್ದಾರೆ.

ಪ್ರವೀಣ್.ಎಂ.ಹೆಚ್, ಪವರ್ ಟಿವಿ, ರಾಮನಗರ

Exit mobile version