Site icon PowerTV

ಹೆಚ್​​​ಡಿಕೆ ಸ್ವಕ್ಷೇತ್ರದಲ್ಲಿ ಡಿಕೆಶಿಗೆ ಭರ್ಜರಿ ಸ್ವಾಗತ

ರಾಮನಗರ : ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ಗೆ ಕೈ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್ ಸಿಲ್ಕ್ ಫಾರಂನಿಂದ ಗೌಡಗೆರೆವರೆಗೂ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ಮಾಡಿದರು. ಈ ಮಧ್ಯೆ ಶೇರ್ವ ಸರ್ಕಲ್ ಬಳಿ 160 ಕೆಜಿ ತೂಕದ ಬೃಹತ್ ಸೇಬಿನ ಹಾರ ಹಾಕಿ ಹೂ ಮಳೆ ಸುರಿಸುವ ಮೂಲಕ ಸ್ವಾಗತ ಕೋರಿದ್ದಾರೆ.

ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಡಿಕೆ ಶಿವಕುಮಾರ್. ಸೇಬಿನ ಹಾರದಿಂದ ಸೇಬು ಕಿತ್ತುಕೊಂಡು ತಿಂದ ಡಿಕೆಶಿ ಈ ವೇಳೆ ಮುಂದಿನ ಸಿಎಂ ಡಿಕೆಶಿ ಎಂದು ಕೈ ಕಾರ್ಯಕರ್ತರು ಘೋಕ್ಷಣೆ ಕೂಗಿದ್ದಾರೆ.

Exit mobile version