Site icon PowerTV

ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ ಸಾಕು : ಡಿ.ಕೆ ಶಿವಕುಮಾರ್

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವುದು ಅನ್ಯಾಯ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವುದು ಅನ್ಯಾಯ, ಘಟನೆಯನ್ನ ನಾವು ಖಂಡಿಸುತ್ತೇವೆ‌. ಇದರಲ್ಲಿ ಮಧ್ಯ ಪ್ರವೇಶ ಮಾಡಲು ನಾವು ತಯಾರಿಲ್ಲ. ಇದರಲ್ಲಿ ರಾಜಕಾರಣ ಮಾಡಿದ್ರೆ ಉಪಯೋಗ ಇಲ್ಲ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ ಸಾಕು. ಕಾರ್ಯಕರ್ತರ ಆಕ್ರೋಶ, ಜನರ ಆಕ್ರೋಶ ಮೊದಲಿಂದ ಇದೆ‌ ಎಂದರು.

ಅದಲ್ಲದೇ, ಪ್ರಾರಂಭದಿಂದ ಒಂದೊಂದೆ ನಿಯಂತ್ರಣ ಮಾಡಿದ್ರೆ ಈ ಸಂದರ್ಭ ಆಗುತ್ತಿರಲಿಲ್ಲ. ನೀವು ಏನಾದರೂ ತನಿಖೆ ಮಾಡಿ. ಯಾರನ್ನಾದರೂ ಬ್ಯಾನ್ ಮಾಡಿ. ಅವರ ಕುಟುಂಬಕ್ಕೆ ನ್ಯಾಯ ಕೊಡಿ. ರಾಜ್ಯಕ್ಕೆ ಶಾಂತಿ ಕೊಡಿ ಸಾಕು. ಅವರವರ ಧರ್ಮ ರಕ್ಷಣೆ ಮಾಡುವ ಕೆಲಸ ಅವರವರು ಮಾಡ್ತಾರೆ ಎಂದು ಸರ್ಕಾರಕ್ಕೆ ಡಿ ಕೆ ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ನಾನು ನಿನ್ನೆ ಸಂಜೆ ಅಲ್ಲಿಗೆ ಹೋಗಬೇಕು ಎಂದು ತೀರ್ಮಾನ ಮಾಡಿದ್ದೆ. ವಿಕೋಪವಿದೆ ಬೇಡ ಎಂದು ಪೊಲೀಸ್ ಆಫೀಸರ್ಸ ಹೇಳಿದ್ರು. ಸಿಟ್ಟಿಂಗ್ ಎಂಪಿ, ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ನಾಲ್ಕು ದಿನ ಆದ ಮೇಲೆ ಬನ್ನಿ ಎಂದು ಹೇಳಿದ್ರು. ಹಾಗಾಗಿ ನಾನು ಸುಮ್ಮನಾದೆ‌. ಈ ಘಟನೆಯಿಂದ ನಮ್ಮ ಪಕ್ಷಕ್ಕೆ ಶಾಕ್ ಆಗಿದೆ ಎಂದು ಹೇಳಿದ್ದಾರೆ.

Exit mobile version