Site icon PowerTV

ಮಂಗಳೂರಿನಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

ಮಂಗಳೂರು: ಜವಳಿ ಅಂಗಡಿಯೊಂದಕ್ಕೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಇರಿದು ಕೊಲೆಗೈದಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಇಂದು (ಗುರುವಾರ) ಸಂಜೆ ನಡೆದಿದೆ.

ಸುರತ್ಕಲ್‌ನ ಮಂಗಲ್‌ಪಾದೆ ನಿವಾಸಿ ಫಾಜಿಲ್‌ ಎಂಬುವರಿಗೆ ಬಟ್ಟೆ ಅಂಗಡಿಗೆ ನುಗ್ಗಿ ಮಾರಕಾಸ್ತ್ರದಿಂದ ತೀವ್ರವಾಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ, ಇದರಿಂದ ಹಲ್ಲೆಗೊಳಗಾದ ಯುವಕ ಫಾಜಿಲ್ ಅನ್ನು ತಕ್ಷಣ ಆಸ್ಪತ್ರೆಗೆ ದಾಖಲಾಗಿಸಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಇನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಬೆಳ್ಳಾರೆಯಲ್ಲಿ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯಾಗಿತ್ತು. ಇದರ ಬೆನ್ನಲ್ಲೇ ಈ ಕೊಲೆ ನಡೆದಿದೆ.

Exit mobile version