Site icon PowerTV

ಕಾಸು ಕೊಟ್ಟು ಬಂದವರು ಕೆಲಸ ಮಾಡಲ್ಲ: ಪೊಲೀಸರ ವಿರುದ್ಧ ವಿಶ್ವನಾಥ್ ಅಸಮಾಧಾನ

ಬೆಂಗಳೂರು: ಕಾಸು ಕೊಟ್ಟು ಬಂದವರು ಎಲ್ಲಿ ಕೆಲಸ ಮಾಡ್ತಾರೆ? ಅಂತ ಪೊಲೀಸರ ಮೇಲೆ ಮಾಜಿ ಸಚಿವ ಹೆಚ್. ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಹತ್ಯೆ ದುರಾದೃಷ್ಟಕರ. RSS, ಭಜರಂಗದಳ, ವಿಶ್ವಹಿಂದೂ ಪರಿಷತ್, ನಾವೂ ಕೂಡ ಬಾಯಿಗೆ ಬಂದಂತೆ ಹೇಳಿಕೆ ಕೊಡಲಾಗುತ್ತಿದೆ. ಯಾವ ಪುರುಷಾರ್ಥ ಇಲ್ಲದೆ ಹತ್ಯೆ ಮಾಡುತ್ತಿದ್ದಾರೆ. ಪೊಲೀಸರು ಇದನ್ನ ಟಫ್ ಆಗಿ ಡೀಲ್‌ ಮಾಡಬೇಕು ಎಂದರು.

ಇನ್ನು ಬಿಜೆಪಿ ಪಕ್ಷದ ಸರ್ಕಾರ ಮೂರು ವರ್ಷ ತುಂಬಿ ಜನೋತ್ಸವ ಕಾರ್ಯಕ್ರಮ ಮಾಡ್ತಿದೆ. ಪ್ರಜಾಪ್ರಭುತ್ವದಲ್ಲಿ ಜನರಿಗಾಗಿ ಮಾಡುವ ಕಾರ್ಯಕ್ರಮ ಜನೋತ್ಸವ. ಕಾಂಗ್ರೆಸ್ ಸಿದ್ದರಾಮೋತ್ಸವ ಎಂಬ ನೆಪದಲ್ಲಿ ವ್ಯಕ್ತಿ ಪೂಜೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಇಂದ ಸಿಎಂ ಆದವರು, ಎಲ್ಲೂ ಕಾಂಗ್ರೆಸ್ ಪಕ್ಷದ ಸಿಎಂ‌ ಎಂದು ಹೇಳಲಿಲ್ಲ ಎಂದು ಹೇಳಿದರು.

ಅಲ್ಲದೇ ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ಆಗಲಿಲ್ಲವಾ.? ಹಿಂದೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಮೇಲೆ ಸ್ವಾಮೀಜಿಯವರೇ ಆರೋಪ ಮಾಡಿದರು. ಸ್ವಾಮೀಜಿಯವರು ದುಡ್ಡು ಕೊಟ್ಟು, ದುಡ್ಡು ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಾಯುಕ್ತ ಬಾಗಿಲು ಮುಚ್ಚಿಸಿದವರು ನೀವು. ಎಲ್ಲಿ ಬಂಧನಕ್ಕೆ ಒಳಗಾಗ್ತೀವಿ ಅನ್ನೋ ಹೆದರಿಕೆಗೆ ಲೋಕಾಯುಕ್ತ ಬಾಗಿಲು ಮುಚ್ಚಿಸಿದರು ಎಂದು ಕಿಡಿಕಾಡಿದರು.

Exit mobile version