Site icon PowerTV

ದೀದಿ ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ಹಗರಣ ಮುಳುವಾಗುತ್ತಾ..?

ಪಶ್ಚಿಮ ಬಂಗಾಳದ ಟಿಎಂಸಿಯ ಮೂರು ಡಜನ್ ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಬಾಂಬ್​ ಸಿಡಿಸಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತರ ಬಂಧನದಿಂದ ಪಕ್ಷದ ಒಳಗೆ ಸಮಸ್ಯೆ ಸೃಷ್ಟಿಯಾಗಿದೆ ಎಂಬ ಸುಳಿವನ್ನು ನೀಡಿದ್ದಾರೆ.

ಟಿಎಂಸಿಯ 31 ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ. ಅವರಲ್ಲಿ 21 ಮಂದಿ ನನ್ನ ಜತೆ ಸಂಪರ್ಕದಲ್ಲಿದ್ದಾರೆ. ಬಿಜೆಪಿಯ ಮುಸ್ಲಿಂ ವಿರೋಧಿ ಹಣೆಪಟ್ಟಿ ಕುರಿತು ಮಾತನಾಡಿರುವ ಚಕ್ರವರ್ತಿ, ದೇಶದ ಈಗಿನ ಮೂರು ಅತಿ ದೊಡ್ಡ ಸ್ಟಾರ್‌ಗಳು ಮುಸ್ಲಿಮರು- ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್. ಹಾಗಾದರೆ ಇದು ಹೇಗೆ ಸಾಧ್ಯ..? ಬಿಜೆಪಿ 18 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.

ಬಿಜೆಪಿ ಅವರನ್ನು ದ್ವೇಷಿಸಿದರೆ ಮತ್ತು ಹಿಂದೂಗಳು ಅವರನ್ನು ಪ್ರೀತಿಸದೆ ಇದ್ದರೆ ಈ ರಾಜ್ಯಗಳಲ್ಲಿ ಅವರ ಸಿನಿಮಾಗಳು ಅತಿ ದೊಡ್ಡ ಗಳಿಕೆ ಮಾಡುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ನಾನು ಇಂದು ಈ ಮಟ್ಟಕ್ಕೆ ಬೆಳೆದಿರುವುದು ಏಕೆಂದರೆ, ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ನನ್ನನ್ನು ಪ್ರೀತಿಸುತ್ತಾರೆ ಎಂದು ಮಿಥುನ್ ಚಕ್ರವರ್ತಿ ಹೇಳಿದ್ದಾರೆ.

Exit mobile version