Site icon PowerTV

ಕಾಂಗ್ರೆಸ್​​ ಮೊಸಳೆ ಕಣ್ಣೀರು ಹಾಕೋದು ಬೇಡ: ಸಿ.ಟಿ.ರವಿ

ಬೆಂಗಳೂರು: ಕಾಂಗ್ರೆಸ್​​ ಮೊಸಳೆ ಕಣ್ಣೀರು ಸುರಿಸೋದು ಬೇಡಾ ಎಂದು ವಿಪಕ್ಷ ನಾಯಕರ ವಿರುದ್ಧ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾಡಿದ್ದಾರೆ.

ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ತಾರೆ ಎಂಬ ಡಿ ಕೆ ಶಿವಕುಮಾರ್​​ ಹೇಳಿಕೆ ವಿಚಾರ ಸಂಬಂಧ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಸಾಲು ಸಾಲು ಹಿಂದೂ ಕಾರ್ಯಕರ್ತ ಹತ್ಯೆ ಆದಾಗ, ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ ಹತ್ಯೆ, ಹಾಗೂ  ಮೂಡುಬಿದಿರೆಯಲ್ಲಿ ಪ್ರಶಾಂತ್ ಹತ್ಯೆ ಆದಾಗ ಕಾಂಗ್ರೆಸ್ ಹೇಗೆ ನೆಡೆದುಕೊಂಡಿತು ಅಂತ ನಾವು ನೋಡಿದ್ದೀವಿ, ಹಾಗಾಗಿ ಇವತ್ತು ಮೊಸಳೆ ಕಣ್ಣೀರು ಸುರಿಸೋದು ಬೇಡಾ ಎಂದು ತಿರುಗೇಟು ನೀಡಿದರು.

ಇನ್ನು ಪ್ರವೀಣ್ ಹತ್ಯೆಗೆ ಯಾರು ಕಾರಣ ಆಗಿದ್ದಾರೆ. ಅವರಿಗೆ ಏನ್ ಮಾಡಬೇಕೋ ಎಂಬುದು ನಮಗೆ ಗೊತ್ತಿದೆ. ಅದನ್ನು ನಾನು ಮಾತಾಡಲ್ಲ, ಮಾಡಿ ತೋರಿಸ್ತೀನಿ ಎಂದು ಸ್ಪಷ್ಟನೆ ನೀಡಿದರು.

Exit mobile version