Site icon PowerTV

ಸರ್ಕಾರಿ ಶಾಲೆಗೆ ಬಂತು ಜಪಾನ್ ರೋಬೋ

ಚಾಮರಾಜನಗರ: ಖಾಸಗಿ ಶಾಲೆ, ಹೈಟೆಕ್ ಶಾಲೆಗಳು ಹಾಗೂ ಉನ್ನತ ಶಿಕ್ಷಣದ ಕಾಲೇಜಿಗೆ ಸೀಮಿತವಾಗಿದ್ದ ರೋಬೊ ರಾಜ್ಯದಲ್ಲೇ ಮೊದಲ‌ ಬಾರಿಗೆ ಸರ್ಕಾರಿ ಶಾಲೆಯೊಂದಕ್ಕೆ ಬಂದಿದೆ.‌ ಇದು ಮಕ್ಕಳು, ಶಿಕ್ಷಕರ ಸಂತಸಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಆ ರೋಬೋನ ವ್ಯವಸ್ಥೆ ಮಾಡಿದ್ದು ಸರ್ಕಾರ ಅಲ್ಲ. ಬದಲಿಗೆ ರಾಜಕಾರಣಿಯ ಅಭಿಮಾನಿ ಕೊಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರೋಬೋ ಪಾಠ ಮಾಡಲಿದೆ. ಸಚಿವ ವಿ‌.ಸೋಮಣ್ಣ ಅಭಿಮಾನಿ ಬಳಗವು 12 ಲಕ್ಷ ರೂ‌.ವೆಚ್ಚದಲ್ಲಿ ರೊಬೊಟಿಕ್ ಮತ್ತು ಸೈನ್ಸ್ ಲ್ಯಾಬ್ ಕೊಡುಗೆ ನೀಡಿದ್ದು, ಸೋಮಣ್ಣ ಅವರಿಂದಲೇ ಲೋಕಾರ್ಪಣೆಗೊಳ್ಳುತ್ತಿದೆ. ಇದನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಬಿದ್ಯುತ್ ಎಂಬ ಈ ರೋಬೋ ಬೇಕಾದ ಭಾಷೆಯಲ್ಲಿ ಯಾವುದೇ ಮಾಹಿತಿ ಕೊಡಲಿದ್ಯಂತೆ.

ರೋಬೋ ಜೊತೆಗೆ 2000 ಮಾಡೆಲ್ ತಯಾರಿಸುವ ಕಿಟ್ ಇದ್ದು, ವಿದ್ಯಾರ್ಥಿಗಳು ಯಾವ ಮಾಡೆಲ್ ಮಾಡಬೇಕೆಂದರೂ ರೋಬೊ‌ ಮಾರ್ಗದರ್ಶನ ಕೊಡಲಿದೆ. ಬೀದಿ ದೀಪ ತಯಾರಿಕೆ ಹೇಗೆ..? ವಾಯು ಶಕ್ತಿ, ಸೌರಫಲಕ, ಮೊಬೈಲ್ ಕಾರ್ಯ ನಿರ್ವಹಣೆ,‌ ಸೂಕ್ಷ್ಮ ದರ್ಶಕ ತಯಾರಿಸುವುದು ಹೇಗೆ ಎಂಬುದನ್ನೆಲ್ಲಾ ವಿದ್ಯಾರ್ಥಿಗಳು ಪ್ರಾಕ್ಟಿಕಲ್ಲಾಗಿ ಕಲಿಯಲಿದ್ದಾರೆ.

ಡಿಜಿಟಲ್ ಕ್ಲಸ್ಟರ್ ಶಾಲೆ ಪರಿಕಲ್ಪನೆಯಡಿ ಈ ರೋಬೋ ಕಾರ್ಯ ನಿರ್ವಹಿಸಲಿದ್ದು, ಗಣಿತ, ವಿಜ್ಞಾನ ಪಾಠ ಅಷ್ಟೇ ಅಲ್ಲದೇ, ಹಾಡು ಹಾಡಲಿದೆ, ಡ್ಯಾನ್ಸ್ ಮಾಡಲಿದೆ, ಕಥೆಗಳನ್ನು ಹೇಳಲಿದೆ, ಸಾಮಾನ್ಯ ‌ಜ್ಞಾನದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳಲಿದೆ.

ಶ್ರೀನಿವಾಸ್ ನಾಯಕ ಪವರ್ ಟಿವಿ ಚಾಮರಾಜನಗರ

Exit mobile version