Site icon PowerTV

ಹೈಫೈ ಬ್ರ್ಯಾಂಡ್ ಸ್ಕಾಚ್‌ಗಳೇ PU ಫೇಲ್​ ಗ್ಯಾಂಗ್‌ನ ಟಾರ್ಗೆಟ್

ಕಲಬುರಗಿ : ‘ಮದ್ಯ’ಕ್ಕಾಗಿ ಮಧ್ಯರಾತ್ರಿ ಮದ್ಯದಂಗಡಿಗೆ ನುಗ್ಗಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ನಗರದಲ್ಲಿ ವೈನ್‌ಶಾಪ್‌ಗೆ ಕನ್ನ ಹಾಕಿದ್ರೂ ಲೋ ಬ್ರ್ಯಾಂಡ್ ಸ್ಕಾಚ್ ಕದಿಯಲ್ಲ..! ಹೈಫೈ ಬ್ರ್ಯಾಂಡ್ ಸ್ಕಾಚ್‌ಗಳೇ PU ಫೇಲ್​ ಗ್ಯಾಂಗ್‌ನ ಟಾರ್ಗೆಟ್ ಮಾಡುತಿತ್ತು. ಆದರೆ ಈ ಖದೀಮರು ತುಷಾರ್, ಗುರುರಾಜ್, ಮೋಹನ್ ಕಲಬುರಗಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಇನ್ನು, ಅರೆಬೆತ್ತಲೆ ಆಗಿ ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಎಂಟ್ರಿ ಕೊಡ್ತಾರೆ. ‘ಮದ್ಯ’ಕ್ಕಾಗಿ ಮಧ್ಯರಾತ್ರಿ ಮದ್ಯದಂಗಡಿಗೆ ನುಗ್ಗುವ ಪಿಯು ಗ್ಯಾಂಗ್. ಪಿಯು ಫೇಲ್ ಆದ ಮೇಲೆ ಎಣ್ಣೆ ಹೊಡೆಯೋ ಅಭ್ಯಾಸ ಮಾಡಿಕೊಂಡಿದ್ದರು. ಕೊಟನೂರು ಬಡಾವಣೆಯಲ್ಲಿನ ವೈನ್‌ಶಾಪ್‌ಗೆ ಕನ್ನಹಾಕಿ ತಗಲಾಕ್ಕೊಂಡ ಕಳ್ಳರು. ಹೈಫೈ ವೈನ್‌ಶಾಪ್ ಕಳ್ಳರ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version