Site icon PowerTV

ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ನಗರದ ಐಜಿ ರಸ್ತೆಯಲ್ಲಿ ಬಿಂದಾಸ್ ಓಡಾಟ..!

ಹಾಸನ : ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ನಗರದ ಐಜಿ ರಸ್ತೆಯಲ್ಲಿ ಬಿಂದಾಸ್ ಓಡಾಟ ಮಾಡುತ್ತಿದ್ದ ಘಟನೆ ಹಾಸನದಲ್ಲಿ ನಡೆದಿದೆ.

ಕೊಚ್ಚಿ ಹೋಗಿದ್ದ ವ್ಯಕ್ತಿಯ ಓಡಾಟ ಕಂಡು ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಜುಲೈ 12 ರಂದು ನಗರದ ಉಂಡೇ ದಾಸರಹಳ್ಳಿ ರಾಜ ಕಾಲುವೆ ಬಳಿ ಈ ಘಟನೆ ನಡೆದಿದ್ದು, ಅಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ಪೀಕಲಾಟ ತಂದಿಟ್ಟಿದ್ದಾನೆ. ಮಳೆಯ ನಡುವೆಯೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿದ ಶೋಧ ಕಾರ್ಯ ನಡೆಸಿದ್ದು, ಶೋಧ ಕಾರ್ಯ ನಡೆಸಿ ಸುಸ್ತಾಗಿ ಕಾರ್ಯ ಸ್ಥಗಿತಗೊಂಡಿದೆ.

ಇನ್ನು, ಯಾರಿಗೂ ಕಾಣದ ಹಾಗೆ ನೀರಿನಿಂದ ಎದ್ದು ಬಂದಿರೋ ಸುರೇಶ್ 14 ದಿನಗಳ ಬಳಿಕ ನಗರದಲ್ಲಿ ಪ್ರತ್ಯಕ್ಷ ವಾಗಿ ಓಡಾಡ್ತಿರೋ ವ್ಯಕ್ತಿ. ಹಳ್ಳದಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಯಲು ಹೋಗಿದ್ದವನ ಬಿಂದಾಸ್ ಓಡಾಟ ಮಾಡಿದ್ದಾನೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲರಿಂದ ಸುರೇಶ್ ಗೆ ತರಾಟೆ ತೆಗೆದುಕೊಂಡಿದ್ದು, ಚಿಂದಿ ಆಯುವ ವ್ಯಕ್ತಿಯನ್ನು ಕಂಡು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Exit mobile version