Site icon PowerTV

ಇತಿಹಾಸ ನಿರ್ಮಿಸಿದ, ಒಂದೇ ವೇದಿಕೆ ಮೇಲೆ 400 ಜೋಡಿ ಸರಳ ಮದುವೆ

ಬೀದರ್ : ಗಡಿ ಜಿಲ್ಲೆ ಬೀದರ್ ಚಿಟ್ಟಗುಪ್ಪಾ ತಾಲ್ಲೂಕಿನ ಮನ್ನಖೇಳಿ ಗ್ರಾಮದಲ್ಲಿ ಒಂದೇ ವೇದಿಕೆ ಮೇಲೆ ಸರಳ ವಿವಾಹದಲ್ಲಿ 400 ಜೋಡಿಗಳು ಎಕ ಕಾಲಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜಿಲ್ಲೆಯ ಚಿಟಗುಪ್ಪ ತಾಲೂಕಿನ ರೇಕುಳಗಿ ಗ್ರಾಮದ ಹೊರ ವಲಯದಲ್ಲಿರುವ ಬುದ್ಧ ವಿಹಾರದಲ್ಲಿ ಮಹಾ ಮಾನವ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಸರಳ ಸಾಮೂಹಿಕ ವಿವಾಹದಲ್ಲಿ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 400 ಜೋಡಿಗಳು ಮದುವೆಯಾದ್ರು.

ಸರಳವಾಗಿ ಮದುವೆಯಾಗುವುದರಿಂದ ಮದುವೆಯ ದುಂದು ವೇಚ್ಚಕ್ಕೆ ಕಡಿವಾಣ ಬಿದ್ದಿದ್ದು ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಸರಳವಾಗೆ ಮದುವೆಯಾಗ ಬೇಕು ಎಂದು ಸಮಾರಂಭದಲ್ಲಿ ಪಾಲ್ಗೊಂಡವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ನಿಗಮ ಮಂಡಳಿ ಅಧ್ಯಕ್ಷ ಡಾ.ಶೈಲೇಂದ್ರ ಬೇಲ್ದಾಳೆ. ಮುಖಂಡರಾದ ಅನೀಲ ಬೆಳ್ದಾರ್, ಮಾರುತಿ ಬೌದ್ದೆ, ಅಬ್ದುಲ್ ಮನ್ನಾನ್ ಶೇಠ್, ಸಂಗಮೇಶ ನಾಸಿಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version