Site icon PowerTV

ಮಲಗಿದ್ದವರ ಮೇಲೆ ಹರಿದ ವಾಹನ: ಓರ್ವ ಸಾವು, ಮೂವರಿಗೆ ಗಾಯ

ಕೊಪ್ಪಳ: ಏಕಾಏಕಿ ಮಲಗಿದ್ದವರ ಮೇಲೆ ವಾಹನ ಹರಿದು ಓರ್ವ ವೃದ್ದ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ‌ ಐತಿಹಾಸಿಕ ಹುಲಗೆಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ.

75 ವರ್ಷದ ತಿಪ್ಪಣ್ಣ ಸಾವನ್ನಪ್ಪಿದ್ದು, ಘಟನೆಯಲ್ಲಿ ಹನುಮವ್ವ, ಮಲ್ಲವ್ವ ಹಾಗೂ ತುಕಾರಾಂ ಎಂಬುವವರಿಗೆ ಗಾಯವಾಗಿದೆ. ದೇವಸ್ಥಾನಕ್ಕೆ ಬಂದವರು ಬಳೆ ಅಂಗಡಿಯ ಮುಂದೆ ಮಲಗಿದವರ ಮೇಲೆ ಒಮ್ಮೆಲೇ ಎರಗಿದ ಅಶೋಕ ಲೈಲ್ಯಾಂಡ ವಾಹನ. ವಾಹನ ಮೈಮೇಲೆ ಬರತ್ತಿದಂತೆ ಎದ್ದು ಕೆಲ ಜನರು ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡರು ಇದ್ದರಿಂದ ಭಾರಿ ಅನಾಹುತ ತಪ್ಪಿತು.

ಈ ದೃಶ್ಯವು ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಲಗಿದ್ದವರ ಮೇಲೆ ವಾಹನ ಹರಿದ ಕಾರಣ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version