Site icon PowerTV

ಗಾಂಜಾ ಸೇವಿಸಿ, ಗುಂಗಿನ ನಶೆಯಲ್ಲಿ ತೇಲುತ್ತಿದ್ದಾರಾ ವಿದ್ಯಾರ್ಥಿಗಳು..?

ಶಿವಮೊಗ್ಗ : ಹಾಡಹಗಲೇ ಗಾಂಜಾ ಸೇವಿಸಿ, ಗುಂಗಿನ ನಶೆಯಲ್ಲಿ ತೇಲುತ್ತಿದ್ದ ಘಟನೆ ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ನಡೆದಿದೆ.

ನಗರದ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ಮುಂಭಾಗದಲ್ಲೇ ನಶೆ ಗುಂಗಿನಲ್ಲಿ ವಿದ್ಯಾರ್ಥಿಗಳು. ಹಾಡಹಗಲೇ ಗಾಂಜಾ ಸೇವಿಸಿ, ಗುಂಗಿನ ನಶೆಯಲ್ಲಿ ತೇಲುತ್ತಿದ್ದಾರಾ ವಿದ್ಯಾರ್ಥಿಗಳು…? ಗಾಂಜಾ ಅಲ್ಲ ವಿದ್ಯಾರ್ಥಿಗಳು ಮದ್ಯ ಸೇವಿಸಿದ್ದರು ಎಂದು ಕಾಲೇಜು ಆಡಳಿತ ಮಂಡಳಿ ಒಪ್ಪಿಕೊಂಡಿದೆ.

ಇನ್ನು, ಈಗಾಗಲೇ ಮೂವರು ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿರುವ ಕಾಲೇಜು ಆಡಳಿತ ಮಂಡಳಿ. ಪವರ್ ಟಿ.ವಿ. ಗೆ ಸ್ಪಷ್ಟನೆ ನೀಡಿದೆ. ಪೆಸಿಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಡಿಪ್ಲೊಮಾ ವ್ಯಾಸಾಂಗ ಮಾಡುತ್ತಿದ್ದು, ವಿದ್ಯಾರ್ಥಿಗಳು ನಶೆಯಲ್ಲಿ ತೇಲುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Exit mobile version