Site icon PowerTV

ಅಪಾಯದಲ್ಲಿದೆ ನಾಗೋಡಿ ಘಾಟಿ ರಸ್ತೆ

ಶಿವಮೊಗ್ಗ: ಜಿಲ್ಲೆಯ ನಿಟ್ಟೂರು ಸಮೀಪದ ನಾಗೋಡಿಯ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಕುಸಿದಿದೆ. ಬರೋಬ್ಬರಿ 4.38 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆ ಅಲ್ಪ ಮಳೆಗೆ ಕುಸಿದಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಗೋಡೆ ಕುಸಿದ್ದರಿಂದ ಗ್ರಾಮಸ್ಥರು ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ತಡೆಗೋಡೆ ನಿರ್ಮಾಣದ ಹೆಸರಿನಲ್ಲಿ ಕೆಲ ಅಧಿಕಾರಿಗಳು ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು, ಉಡುಪಿ, ದಕ್ಷಿಣ ಕನ್ನಡ, ಉ.ಕನ್ನಡ ಭಾಗಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸೂಕ್ತ ರೀತಿಯಲ್ಲಿ ತಡೆಗೋಡೆಯ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದಾರೆ.

Exit mobile version