Site icon PowerTV

ಜಮೀರ್ ಮುಖ್ಯಮಂತ್ರಿ ಆಗುತ್ತಾರೆ: ಪಂಚಾಕ್ಷರಿ ಸ್ವಾಮೀಜಿ

ಬೆಳಗಾವಿ: ‘ಜಮೀರ್ ಅಹಮದ್‌ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವ ಧರ್ಮೀಯರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಮುಂಬರುವ ದಿನಗಳಲ್ಲಿ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ತಾಲ್ಲೂಕಿನ ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಯಕ್ಕುಂಡಿ ಗ್ರಾಮದ ದಿಲಾವರ್ ದರ್ಗಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಯಕ್ಕುಂಡಿ ಗ್ರಾಮದ ದರ್ಗಾ ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಈ ದರ್ಗಾಗೆ ಜಮೀರ್ ಅವರು ಬೆಂಗಳೂರಿನಿಂದ ಬಂದಿದ್ದಾರೆ. ಇದರ ಶಕ್ತಿ ಎಷ್ಟಿದೆ ಎನ್ನುವುದನ್ನು ನೀವು ವಿಚಾರ ಮಾಡಬೇಕು. ಈಗಾಗಲೇ ಸಚಿರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇಂಥ ಒಳ್ಳೆಯ ಮನಸ್ಸು ಇರುವವರು ಮುಂದೆ ಮುಖ್ಯಮಂತ್ರಿ ಆಗಿ ಇನ್ನಷ್ಟು ಕೆಲಸ ಮಾಡಬೇಕು’ ಎಂದೂ ಹೇಳಿದರು.

‘ಇದರ ಜೊತೆಗೆ ಬೈಲಹೊಂಗಲ ಭಾಗದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಒಳ್ಳೆಯ ಕೆಲಸ ಮಾಡಿದ್ದಾರೆ.‌ ಮುಂದೆಯೂ ಅವರು ಆರಿಸಿ ಬರಬೇಕು. ಮಂತ್ರಿಯೂ ಆಗಬೇಕು’ ಎಂದರು.

ಶಾಸಕರಾದ ಜಮೀರ್‌ ಅಹಮದ್‌ ಖಾನ್, ಮಹಾಂತೇಶ ಕೌಜಲಗಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಇದ್ದರು.

Exit mobile version