Site icon PowerTV

ಹಾಸನದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ : ರೈತರ ಬೆಳೆ ಹಾನಿ

ಹಾಸನ : ಕಾಡಾನೆಗಳ ದಾಂಧಲೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾದ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಸಿರಗೂರು ಗ್ರಾಮದಲ್ಲಿ ನಡೆದಿದೆ.

ಹದಿಮೂರು ಕಾಡಾನೆಗಳ ಹಿಂಡಿನಿಂದ ಕಾಫಿ, ಬಾಳೆ ನಾಶ ಮಾಡಿದೆ. ಇನ್ನು,ಕಾಡಾನೆಗಳ ದಾಂಧಲೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕಾಫಿ ತೋಟದಲ್ಲೇ ಗಜಪಡೆ ಬೀಡುಬಿಟ್ಟಿದೆ. ಚಂದ್ರಮ್ಮ, ಶಂಕರೇಗೌಡ ಎಂಬುವವರಿಗೆ ಸೇರಿದ ತೋಟವಾಗಿದೆ.

ಇನ್ನು, ಬೆಳೆ ಹಾನಿಯಿಂದ ಅಪಾರ ಪ್ರಮಾಣದ ನಷ್ಟವಾಗಿದ್ದು, ರಾತ್ರಿಯಿಡಿ ಮನೆಯ ಸಮೀಪವೇ ಓಡಾಡಿದ ಕಾಡಾನೆಗಳು ಮನೆಯಿಂದ ಹೊರ ಬರಲಾರದೆ ಜೀವ ಕೈಯಲ್ಲಿ ಹಿಡಿದು ಇಡೀ ರಾತ್ರಿ ಜೀವನ ಕಳೆದಿದ್ದಾರೆ. ಬೆಳಿಗ್ಗೆ ಆಗುತ್ತಿದ್ದಂತೆ ಚಂದ್ರಮ್ಮ, ಶಂಕರೇಗೌಡ ಕುಟುಂಬಗಳು ಗ್ರಾಮಕ್ಕೆ ಬಂದಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

Exit mobile version