Site icon PowerTV

ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೇನೆ : ಜಮೀರ್ ಅಹ್ಮದ್

ಹುಬ್ಬಳ್ಳಿ : ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೇನೆ ಎಂದು ಡಿಕೆಶಿಗೆ ಮತ್ತೆ ಶಾಸಕ ಜಮೀರ್ ಅಹ್ಮದ್ ತಿರುಗೇಟನ್ನು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು, ನನ್ನ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಸ್ವಾಮೀಜಿ ಅಸಮಾಧಾನ ಮಾಡಿಕೊಂಡಿದ್ದು ಗೊತ್ತಿಲ್ಲ. ಚಲುವರಾಯಸ್ವಾಮಿ ನನಗೆ ಏನನ್ನೂ ಹೇಳಿಲ್ಲ. ಎಐಸಿಸಿಯಿಂದಲೂ ನಂಗೆ ಯಾವುದೇ ಸೂಚನೆ ಬಂದಿಲ್ಲ ಎಂದರು.

ಇನ್ನು, ನಾನು ಪಕ್ಷ ಪೂಜೆನೂ ಮಾಡುತ್ತೇನೆ. ಅದರ ಜೊತೆ ವ್ಯಕ್ತಿ ಪೂಜೆಯನ್ನೂ ಮಾಡ್ತೀನಿ. ನನ್ನ ಅಭಿಪ್ರಾಯ ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ. ರಾಜಕೀಯದಲ್ಲಿ ಲೆವೆಲ್ ಗುರುತಿಸೋದು ಜನ. ನಮ್ಮ ಲೆವಲ್ ಜನ ಹೇಳಬೇಕು ಎಂದು ಡಿಕೆಶಿಗೆ ಮೃದುವಾಗಿಯೇ ತಿರುಗೇಟು ನೀಡಿದ್ದಾರೆ.

Exit mobile version