Site icon PowerTV

ಭಾರತ್​​ ಮಾತಾ ಕೀ ಜೈ ಅಂದ್ರೆ ಮಾತ್ರ ರಾಜಕೀಯ: ಸಿಟಿ ರವಿ

ಬೆಂಗಳೂರು: ಭಾರತ ಮಾತಾ ಕೀ ಜೈ ಅಂದ್ರೆ ಬದುಕು ಅದನ್ನ ನೆನಪಿನಲ್ಲಿಟ್ಟುಕೊಳ್ಳಿ ಜಮೀರ್ ಬಾಯ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಟಾಂಗ್ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂರು ಶೇ 99ರಷ್ಟು ಪಾಕಿಸ್ತಾನದಲ್ಲಿದ್ದಾರೆ. ಅಲ್ಲಿನ ಪರಿಸ್ಥಿತಿ ಮತ್ತು ಹಣೆ ಬರಹ ಏನಿದೆ.! ಎಂದು ತಿಳಿದುಕೊಳ್ಳಿ ಎಂದರು.
ಅಲ್ಲದೇ ಸಾಬ್ರು ಓಟ್ ಹಾಕಿದ್ರೆ ಮಾತ್ರ ಅಧಿಕಾರಕ್ಕೆ ಬರುತ್ತೆ ಎಂಬ ಕಾಲವಿತ್ತು, ಇದೀಗ ಆ ಕಾಲ ಹೋಗಿ ಬಹಳ ದಿನವಾಗಿದೆ ಜಮೀರ್ ಭಾಯ್. ತನ್ನ ಓಟ್ ಬ್ಯಾಂಕ್ ತೋರಿಸಿ ಹೆದರಿಸೋ ಕಾಲ ಹೋಗಿ ಬಹಳ ಕಾಲ‌ವಾಗಿದೆ. ನಾವು ಓಟ್ ಹಾಕಿದ್ರೆ ಮಾತ್ರ ಗೆಲ್ತಾರೆ ಎಂಬ ಬ್ಲಾಕ್ ಮೇಲ್ ಮಾಡ್ತಿದ್ರಲ್ಲ ಆ ಕಾಲವಿಲ್ಲ ಈಗ ಭಾರತ ಮಾತಾ ಕಿ ಜೈ ಅಂದ್ರೆ ಮಾತ್ರ ರಾಜಕೀಯ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ.

 

Exit mobile version