Site icon PowerTV

ಬೀದಿ ನಾಯಿಗಳ ತವರೂರು ಆಯ್ತಾ ಬೆಂಗಳೂರು..?

ಬೆಂಗಳೂರು : ಕಳೆದ ಎರಡು ವರ್ಷಗಳಲ್ಲಿ ಅದೆಷ್ಟು ಮಂದಿ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿದ್ದು, ಸಿಲಿಕಾನ್​ ಸಿಟಿ ಜನರ ನಿದ್ದೆ ಗೆಡಿಸುತ್ತಿದೆ.

ನಗರದಲ್ಲಿ ಜನ್ರ ನಿದ್ದೆಗೆಡಿಸಿದ ಶ್ವಾನಗಳ ಉಪಟಳ, ಬೀದಿ ನಾಯಿಗಳಿಗೆ ಮಕ್ಕಳೇ ಟಾರ್ಗೆಟ್ ಆಗಿದೆ. ಬಿಬಿಎಂಪಿ, ಸರ್ಕಾರದ ನಿರ್ಲಕ್ಷ್ಯಕ್ಕೆ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗ್ತಿದ್ದಾರೆ ಸಾರ್ವಜನಿಕರು. ಕಳೆದ ಎರಡು ವರ್ಷಗಳಲ್ಲಿ ಅದೆಷ್ಟು ಮಂದಿ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿದ್ದು, ಲೆಕ್ಕ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.

ಇನ್ನು, ಬಿಬಿಎಂಪಿ ಸಮೀಕ್ಷೆಯಿಂದ ಬೆಚ್ಚಿಬೀಳಿಸುವ ಮಾಹಿತಿ ಬಯಲಾಗಿದ್ದು, ಎರಡು ವರ್ಷದಲ್ಲಿ ಬೆಂಗಳೂರಿನ 52262 ಮಂದಿಯ ಮೇಲೆ ಬೀದಿನಾಯಿಳು ಅಟ್ಯಾಕ್ ಮಾಡಿದೆ. ತಿಂಗಳಿಗೆ 2177 ಮಂದಿ ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗಿದ್ದಾರೆ. ನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳ ಅಟ್ಟಹಾಸ ಜಾಸ್ತಿಯಾಗುತ್ತಿದೆ.

ಅದಲ್ಲದೇ, ಅನಿಮಲ್ ಬರ್ತ್ ಕಂಟ್ರೋಲ್ (ABC) ಫೇಲ್ಯೂರ್ ಬೀದಿ ನಾಯಿಗಳ ದಾಳಿಗೆ ಕಾರಣ ಆಯ್ತಾ..! ನಾಯಿಗಳ ಸಂತತಿ ನಿಯಂತ್ರಿಸುವಲ್ಲಿ ಎಡವಿದ ಪಾಲಿಕೆ. ABC ಅಭಿಯಾನ & ARV (ಆ್ಯಂಟಿ ರೇಬಿಸ್ ಲಸಿಕೆ) ಜಾಗೃತಿಯಲ್ಲೂ ಪಾಲಿಕೆ ಹಿಂದೆಬಿದ್ದಿದೆ. ನಾಯಿಗಳ ಸಂತತಿ ನಿಯಂತ್ರಣಕ್ಕೆ NGOಗಳ ಕೊರತೆಯೂ ಪಾಲಿಕೆಗೆ ಎದುರಾಗಿದೆ. ABC ನಡೆಸಲು ಈಗಾಗಲೇ ಗುತ್ತಿಗೆ ಪಡೆದಿರುವ ಕೆಲವು NGOಗಳು ಸಮಯಕ್ಕೆ ಬಿಲ್ ಆಗದ ಕಾರಣ ನಿರ್ಲಕ್ಷ್ಯ ತೋರುತ್ತಿದ್ದಾರೆ.

Exit mobile version