Site icon PowerTV

ವೆಸ್ಟ್​ ಇಂಡೀಸ್​ ವಿರುದ್ಧ ಭಾರತಕ್ಕೆ ರೋಚಕ ಜಯ

ವೆಸ್ಟ್‌ ಇಂಡೀಸ್‌ ತಂಡ ನೀಡಿದ ಬೃಹತ್‌ ಗುರಿಯನ್ನ ಬೆನ್ನತ್ತಿ 2ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆಯನ್ನ ಸಾಧಿಸಿದೆ.

ಆತಿಥೇಯರ ವಿರುದ್ಧ ಮೊದಲನೇ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಕೆರಿಬಿಯನ್ನರು 311 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿದ್ದರು. ಆದರೆ, ಮೊದಲನೇ ಪಂದ್ಯದಲ್ಲಿ 97 ರನ್​​ಗಳಿಸಿದ್ದ ನಾಯಕ ಶಿಖರ್‌ ಧವನ್‌ ಇಂದಿನ ಪಂದ್ಯದಲ್ಲಿ ಕೇವಲ 13 ರನ್‌ ಗಳಿಸಿ ಔಟಾದ್ರು.. ನಂತರ ಬಂದ ಶ್ರೇಯಸ್‌ ಅಯ್ಯರ್‌, ಶುಭಮನ್‌ ಗಿಲ್‌, ಸಂಜು ಸ್ಯಾಮ್ಸನ್, ದೀಪಕ್‌ ಹೂಡಾ ಹಾಗೂ ಅಕ್ಸರ್‌ ಪಟೇಲ್‌ ಅವರ ಜವಾಬ್ದಾರಿ ಆಟದಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.

Exit mobile version