Site icon PowerTV

ಮಲ್ಪೆಯಲ್ಲಿ ಗಾಳಕ್ಕೆ ಸಿಕ್ಕ 25 ಕೆ.ಜಿ ತೂಕದ ಮೀನು

ಉಡುಪಿ: ಗಾಳಕ್ಕೆ ಬೃಹತ್ ಗಾತ್ರದ ಎರಡು ಮೀನುಗಳು ಉಡುಪಿಯ ಮಲ್ಪೆಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ ಅವರು,‌ ದೋಣಿಯಲ್ಲಿ ಹೋಗಿ ಹವ್ಯಾಸವಾಗಿ ಮೀನಿಗೆ ಗಾಳ ಹಾಕುತ್ತಿರುತ್ತಾರೆ. ಅದರಂತೆ ಇಂದು ಮೀನಿಗೆ ಗಾಳ ಹಾಕಿದಾಗ ಬೃಹತ್ ಗಾತ್ರದ ಎರಡು ಮೀನುಗಳು ಗಾಳಕ್ಕೆ ಬಿದ್ದಿವೆ.

25 ಕೆ.ಜಿ ತೂಕದ ಮುರು ಮೀನು, ಹಾಗೂ 15 ಕೆ.ಜಿ ತೂಕದ ಕೊಕ್ಕರ್ ಮೀನು ಬಲೆಗೆ ಬಿದ್ದಿದೆ. ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಳೆ ಬಾಳುವ ಮೀನು ಇದಾಗಿದೆ.

Exit mobile version