Site icon PowerTV

ಸುಬ್ರಹ್ಮಣ್ಯ ಜಾತ್ರೆಯಲ್ಲಿ `ಅಪ್ಪು’ ಮೆರವಣಿಗೆ..!

ಶಿವಮೊಗ್ಗ: ನೆಚ್ಚಿನ ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರನ್ನು ಅಗಲಿ 9 ತಿಂಗಳು ಕಳೆಯುತ್ತಾ ಬರುತ್ತಿದೆ. ಅವರ ಅಭಿಮಾನಿಗಳು ಅಪ್ಪುವಿನ ಭಾವಚಿತ್ರವನ್ನು ಎಲ್ಲಾ ಕಾರ್ಯಕ್ರಮದಲ್ಲಿ ಹಿಡಿದು ಓಡಾಡುವುದು ಹೊಸದೇನಲ್ಲ. ಹಾಗೆಯೇ ಸುಬ್ರಹ್ಮಣ್ಯ ಜಾತ್ರೆಯಲ್ಲೂ ಸಹ ಅಪ್ಪುವಿನ ಭಾವಚಿತ್ರ ಮಿಂಚುತ್ತಿದೆ.

ನಗರದ ಗುಡ್ಡೆಕಲ್​ನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಇದಾಗಿದ್ದು, ಇಲ್ಲಿಗೆ ಬರುತ್ತಿರುವ ಅಭಿಮಾನಿಗಳು ನಿನ್ನೆಯಿಂದಲೂ ಅಪ್ಪುವಿನ ಭಾವಚಿತ್ರವನ್ನು ಹಿಡಿದು ಓಡಾಡುತ್ತಿರುವುದು ವಿಶೇಷವಾಗಿ ಕಂಡು ಬರುತ್ತಿದೆ. ದೇವರ ಮಹೋತ್ಸವದಲ್ಲಿ ಅಪ್ಪು ಫೋಟೋ ಹಿಡಿದು ಜೈಕಾರ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಪ್ಪು ಎಂದಿಗೂ ನಮ್ಮ ಜೊತೆಯಲ್ಲೇ ಇದ್ದಾರೆ ಎಂಬ ಭಾವನೆ ಮೂಡಿಸಿದ್ದಾರೆ.

Exit mobile version