Site icon PowerTV

ಫೇಸ್​ಬುಕ್​​ ಪ್ರೇಮ ಪಾಶಕ್ಕೆ ಬಿದ್ದು ಬೇಸ್ತು ಬಿದ್ದ ವಿಟ್ಲದ ಯುವತಿ

ಮಂಗಳೂರು : ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ನಿಜ ವಿಷಯ ತಿಳಿದು ಶಾಕ್ ಆದ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.

ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ನಿಜ ವಿಷಯ ತಿಳಿದು ಶಾಕ್ ಆಗಿದ್ದಾಳೆ. ಫೇಸ್​ಬುಕ್  ಪ್ರೇಮಿಯನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದಿದ್ದ ಯುವತಿ. ಮನೆಯವರು ಬೇಡ ಎಂದರೂ, ಮನೆಯಲ್ಲಿ ರಂಪ ಮಾಡಿದ್ದ ಮಾಡಿದ್ದಾಳೆ.

ಇನ್ನು, ವಕೀಲರ ಸಲಹೆ ಪಡೆದು ವಿಟ್ಲ ಠಾಣೆಗೆ ದೂರು ನೀಡಿದ್ದ ಮನೆಯವರು, ಮಹಿಳಾ ವಕೀಲೆ ಮತ್ತು ಪೊಲೀಸರು ಯುವಕನ ಟ್ರೇಸ್ ಮಾಡಿದಾಗ ಅಸಲಿ ಮುಖ ಬಯಲಾಗಿದ್ದು, ಪ್ರದೀಪ್ ಎಂಬ ಹೆಸರಿನಲ್ಲಿ ಯುವತಿಗೆ ಪ್ರೀತಿಯ ಗಾಳ ಹಾಕಿದ್ದ ಮಂಗಳಮುಖಿ ! ಕುಂದಾಪುರ ತಾಲೂಕಿನ ಶಂಕರನಾರಾಯಣ ಮೂಲದ ಮಂಗಳಮುಖಿ ಪ್ರೀತಿಯ ನಾಟಕವಾಡಿದ್ದು, ಅಸಲಿ ವಿಷಯ ತಿಳಿಯುತ್ತಲೇ ನಾಲ್ಕು ವರ್ಷಗಳ ಪ್ರೀತಿಗೆ ಬ್ರೇಕ್ ಬಿದ್ದಿದೆ.

Exit mobile version