Site icon PowerTV

ರಾಮನಗರ ಕ್ಷೇತ್ರದಿಂದ ದೂರ ಸರಿದ್ರಾ ನಿಖಿಲ್‌ ಕುಮಾರಸ್ವಾಮಿ..?

ರಾಮನಗರ : ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ.

ರಾಮನಗರ ಕ್ಷೇತ್ರದಿಂದ ದೂರ ಸರಿದ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ..? ರಾಮನಗರಿಂದ ನಿಖಿಲ್ ಸ್ಪರ್ಧೆಗೆ ತಾಯಿ ಅನಿತಾ ಕುಮಾರಸ್ವಾಮಿಯೇ ಮುಳುವಾದ್ರಾ..? ಸದ್ಯ ರಾಮನಗರ ಶಾಸಕಿಯಾಗಿರುವ ಅನಿತಾ ಕುಮಾರಸ್ವಾಮಿ ಮತ್ತೊಮ್ಮ ರಾಮನಗರದಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.

ಇನ್ನು, ಈಗಾಗಲೇ ರಾಮನಗರದಿಂದ ಸ್ಪರ್ಧಿಸಲ್ಲ ಎಂದು ಹೇಳಿರುವ ಹೆಚ್ಡಿಕೆ. ನಿಖಿಲ್ ಕ್ಷೇತ್ರದಲ್ಲಿ ಸಂಚರಿಸಿದ್ರೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಡ ಹೇರುವ ಸಾಧ್ಯತೆ ಹೇರುವ ಹಿನ್ನಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗುತ್ತದೆ.

ಅದಲ್ಲದೇ, ಮೊನ್ನೆ ನಡೆದ ಚಾಮುಂಡೇಶ್ವರಿ ಕರಗ ಮಹೋತ್ಸವದ ಕಾರ್ಯಕ್ರಮಕ್ಕೂ ನಿಖಿಲ್ ಗೈರು ಹಾಜರಾಗಿದ್ದು, ಪ್ರತಿವರ್ಷ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಆ ಹಿನ್ನಲೆಯಲ್ಲಿ ನಿಖಿಲ್ ರಾಮನಗರಕ್ಕೆ ಬರದಂತೆ ಷರತ್ತು ಹಾಕಿದ್ರಾ ಅನಿತಾ ಕುಮಾರಸ್ವಾಮಿ. ಕಳೆದ ಹಲವು ತಿಂಗಳಿನಿಂದ ರಾಮನಗರಕ್ಕೆ ಸುಳಿಯದ ಅವರು, ರಾಮನಗರದಲ್ಲಿನ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳಲಿಲ್ಲ.

Exit mobile version