Site icon PowerTV

ಟಾಕಳೆ ವಿರುದ್ದ FIR ದಾಖಲಿಸಿದ ನವ್ಯಶ್ರೀ

ಬೆಳಗಾವಿ : ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ದ ಸೆಕ್ಷನ್ ಹಾಗೂ ಆ್ಯಕ್ಟ್ ಗಳನ್ನ ಹಾಕಿ FIR ದಾಖಲು ಮಾಡಿದ್ದಾರೆ.

ಕಾಂಗ್ರೆಸ್​ ನಾಯಕಿ ನವ್ಯಶ್ರೀಗೆ ವಂಚನೆ ಪ್ರಕರಣ ವಿರುದ್ಧ ಮಾಜಿ ಸಚಿವರ ಆಪ್ತನ ವಿರುದ್ಧ FIR ದಾಖಲು ಮಾಡಿದ್ದಾರೆ. ಬೆಳಗಾವಿಯ APMC ಠಾಣೆಯಲ್ಲಿ ದೂರು ದಾಖಲಿಸಿದ ನವ್ಯಶ್ರೀ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ FIR ದಾಖಲು ಮಾಡಿದ್ದಾರೆ.

ಇನ್ನು, ಸೆಕ್ಷನ್ 376 ಅತ್ಯಾಚಾರ, 366 ಕಿಡ್ನ್ಯಾಪ್, 312 ಗರ್ಭಪಾತ ಮಾಡಿಸಿದ್ದು, 354 ಮಹಿಳೆ ಮೇಲೆ ಹಲ್ಲೆ, 504 ಅವಾಚ್ಯವಾಗಿ ನಿಂದಿಸುವುದು, 506 ಜೀವ ಬೆದರಿಕೆ, 509 ಗೌರವಕ್ಕೆ ಧಕೆ ತರುವುದು, 67A ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನ ಅಪ್ಲೋಡ್ ಮಾಡಿರುವುದು, IT act 66E ಖಾಸಗಿತನಕ್ಕೆ ಧಕೆ ವಿಚಾರದ ಅಡಿಯಲ್ಲೂ ದೂರು ನೀಡಿದ್ದಾರೆ.

Exit mobile version