Site icon PowerTV

JDS ಅಧಿಕಾರಕ್ಕೆ ಬಂದರೆ ಉಚಿತವಾಗಿ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ : ಹೆಚ್​ಡಿಕೆ

ಮೈಸೂರು : JDS ಅಧಿಕಾರಕ್ಕೆ ಬಂದರೆ ಉಚಿತವಾಗಿ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ ನೀಡಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಪಂಚರತ್ನ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಾಮುಂಡಿ ದೇವತೆಯ ಆಶಿರ್ವಾದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಇಡೀ ರಾಜ್ಯಾದ್ಯಂತ ವಾಹನಗಳ ಮೂಲಕ ಪಂಚರತ್ನ ಯೋಜನೆಗೆ ಬಗ್ಗೆ ಅರಿವು ಮೂಡಿಸುತ್ತದೆ. ಸುಮಾರು 100 ದಿನಗಳ ಕಾರ್ಯಕ್ರಮ ಇದಾಗಿದೆ. ಇಡೀ ರಾಜ್ಯದ ಮೂಲೆ ಮೂಲೆಗೆ ಪಂಚರತ್ನ ಯೋಜನೆಯ ಉದ್ದೇಶ ತಲುಪಲಿದೆ ಎಂದರು.

ಇನ್ನು, ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ, ಉದ್ಯೋಗ, ಕೃಷಿ ಇವುಗಳು ಜಾರಿಯಾಗಿದ್ದು, ಯುಕೆಜಿಯಿಂದ ಪಿಯುವರೆಗೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಉಚಿತ ಶಿಕ್ಷಣ ನೀಡಲಿದೆ. 24 ಗಂಟೆ ಸೇವೆ ನೀಡುವ 30 ಬೆಡ್‌ಗಳ ಆಸ್ಪತ್ರೆ ನಿರ್ಮಿಸುವ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಭಾಗ್ಯ ತಲುಪಲಿದೆ. ರೈತರು ಮತ್ತೆ ಮತ್ತೆ ಸಾಲಗಾರರಾಗುವ ಪರಿಸ್ಥಿತಿ ತೊಡೆದು ರೈತರ ಬದುಕು ಹಸನಗೊಳಿಸುವ ಯೋಜನೆ ಇದಾಗಿದ್ದು, ಯುವಕರು 8-10 ಸಾವಿರ ವೇತನಕ್ಕೆ ಮಹಾನಗರಗಳಿಗೆ ಹೋಗದೇ ಸ್ವಂತ ಉದ್ಯೋಗಕ್ಕೆ ದಾರಿ ಮಾಡಿಕೊಡಲಾಗುತ್ತಿದೆ. ಹಾಗೆನೇ ನಾಡಿನ ಪ್ರತಿ ಬಡ ಕುಟುಂಬವೂ ಉಚಿತವಾಗಿ ಸ್ವಂತ ಮನೆ ಹೊಂದುವ ಯೋಜನೆ ಇದಾಗಿದೆ.

Exit mobile version