Site icon PowerTV

26 ನೇ ತಾರೀಕು ಮೌನ ಹೋರಾಟ ಮಾಡುತ್ತೇವೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಭಾರತ ಜೋಡೋ ಯಾತ್ರೆ ಶ್ರೀರಂಗಪಟ್ಟಣ ಪಟ್ಟಣ ಮೈಸೂರು ನಾಗಮಂಗಲ ‌ಮೂಲಕ ಹೋಗುತ್ತದೆ ಎಂದು ಸದಾಶಿವನಗರದಲ್ಲಿ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 26 ತಾರೀಖು‌ ಇಡಿಯವರು ಹಾಜರಾಗುವಂತೆ ಹೇಳಿದ್ದಾರೆ. ನನ್ನ ತಾಯಿಗೆ ನೋಟಿಸ್ ಕೊಟ್ಟಾಗ ಕೋರ್ಟ್ ಗೆ ಹೋದೆ. ಹೀಗಾಗಿ ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ ಎಂದರು.

ಇನ್ನು, ಸೋನಿಯಾ ಗಾಂಧಿಕೋರ್ಟ್ ಗೆ ಹೋಗದೇ ವಿಚಾರಣೆಗೆ ಹಾಜರಾಗಿದ್ದಾರೆ. ಆದ್ರೂ ಅವರಿಗೆ ಕಿರುಕುಳ‌ ನೀಡುತ್ತಿದ್ದಾರೆ. ಹೀಗಾಗಿ ಮೌರ್ಯ ಸರ್ಕಲ್ ನಲ್ಲಿ ಎಲ್ಲಾ ಮುಖಂಡರ ನೇತೃತ್ವದಲ್ಲಿ 26 ನೇ ತಾರೀಕು ಮೌನ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಚೆಲುವರಾಯಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತ ಜೋಡೋ ಯಾತ್ರೆ ಶ್ರೀರಂಗಪಟ್ಟಣ ಪಟ್ಟಣ ಮೈಸೂರು ನಾಗಮಂಗಲ ‌ಮೂಲಕ ಹೋಗುತ್ತದೆ. ಹೀಗಾಗಿ ಅವರನ್ನ ಭೇಟಿಯಾಗಿ ಸಿದ್ದತೆ ಬಗ್ಗೆ ಸಲಹೆ ಕೊಟ್ಟಿದ್ದೇನೆ ಎಂದರು.

Exit mobile version