Site icon PowerTV

‘ಬಿಗ್ ಬಾಸ್ OTT’ ಪ್ರೀಮಿಯರ್ ಡೇಟ್ ರಿವೀಲ್

‘ಬಿಗ್ ಬಾಸ್​ ಕನ್ನಡ ಸೀಸನ್ 9’ ಯಾವಾಗ ಆರಂಭ ಆಗಲಿದೆ ಎಂದು ವೀಕ್ಷಕರು ಕಾದು ಕೂತಿದ್ದರು. ಆದರೆ, ಈಗ ಕಲರ್ಸ್ ಕನ್ನಡ ವಾಹಿನಿ ಇದಕ್ಕೆ ಟ್ವಿಸ್ಟ್​ ನೀಡಿದೆ.

‘ಬಿಗ್​ ಬಾಸ್ OTT’ಯ ಮೊದಲ ಸೀಸನ್ ಆರಂಭಿಸುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಆಗಸ್ಟ್ 6 ಹಾಗೂ 7ರಂದು ಈ ಶೋ ಪ್ರೀಮಿಯರ್ ಆಗಲಿದೆ. ಒಟಿಟಿಯಲ್ಲಿ ಮಾತ್ರ ಈ ಶೋ ಪ್ರಸಾರ ಕಾಣಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಮೂಡಿಬರುವ ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’.. ಬಿಗ್ ಬಾಸ್ ಸೀಸನ್ 9ಕ್ಕಾಗಿ ಕನ್ನಡ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇನ್ನೇನು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. ಆದರೆ ಟಿವಿಯಲ್ಲಿ ಅಲ್ಲ OTTಯಲ್ಲಿ. ಇದು OTTಗಾಗಿಯೇ ಮಾಡುತ್ತಿರುವ ಬಿಗ್ ಬಾಸ್ ಶೋ ಆಗಿದೆ. ಟಿವಿಯಲ್ಲಿ ಬಿಗ್ ಬಾಸ್ OTT ಮೊದಲು ಆರಂಭವಾಗಲಿದ್ದು, ಬಳಿಕ ಟಿವಿಯಲ್ಲಿ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಲಿದೆ. ಇದು ಕನ್ನಡದಲ್ಲಿ ಮೊದಲ ಪ್ರಯತ್ನವಾಗಿದೆ. ಸದ್ಯ ಅದ್ದೂರಿಯಾಗಿ ಮೂಡಿ ಬಂದ ಈ ಪ್ರೋಮೋ ಸಾಕಷ್ಟು ವೈರಲ್ ಆಗುತ್ತಿದೆ.

Exit mobile version