Site icon PowerTV

ಬಹಳಷ್ಟು ಜನಕ್ಕೆ ನಾವು ಸುಪಾರಿ ಕೊಟ್ಟಿದ್ದೇವೆ: ಸಚಿವ ಆರ್ ಅಶೋಕ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಜೀವವೇ ಬಿಜೆಪಿ ಅಂತ ಹೇಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಬಿಎಸ್​​ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಟಿಕೆಟ್ ಕೊಡಬೇಕು. ಯಾರಿಗೆ ಟಿಕೆಟ್ ಕೊಡಬಾರದು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಿದೆ. ನಮ್ಮದು ಗಟ್ಟಿಯಾದ ಹೈಕಮಾಂಡ್ ಎಂದರು.

ಇನ್ನು ನಾವು ಸಿಎಂ ಬಿಎಸ್​​ವೈ ಭೇಟಿ ಮಾಡಿದ್ವಿ, ಅವರು ನಗುನಗುತ್ತಲೇ ಮಾತನಾಡಿದರು. ದೊಡ್ಡ ದೊಡ್ಡ ರ್ಯಾಲಿ ಮಾಡೋಣ ಎಂದಿದ್ದಾರೆ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ರ್ಯಾಲಿ ಅನೌನ್ಸ್ ಮಾಡಿದ್ದೇನೆ. ಮುಂದೆ ಯಾವ್ಯಾವ ಜಿಲ್ಲೆಯಲ್ಲಿ ಮಾಡಬೇಕು, ಅದರ ಬಗ್ಗೆಯೂ ಮಾತನಾಡ್ತೇನೆ. ಎನ್ನುವುದರ ಜತೆಗೆ ನನ್ನ ಜೀವವೇ ಬಿಜೆಪಿ ಅಂತ ಹೇಳಿದರು ಎಂದರು.

ಇದೇ ವೇಳೆ ಕಾಂಗ್ರೆಸ್ ಮುಗಿಸೋಕೆ ಜಮೀರ್​​ಗೆ ಸುಪಾರಿ ಕೊಟ್ಟಿದ್ದೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಹಳಷ್ಟು ಜನಕ್ಕೆ ನಾವು ಸುಫಾರಿ ಕೊಟ್ಟಿದ್ದೇವೆ. ನೋಡ್ತಾ ಇರಿ ಯಾರ್ಯಾರು ಬರ್ತಾರೆಂದು. ಕಾಂಗ್ರೆಸ್​​ನಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ. ಅವರು ನಮ್ಮದನ್ನ ಏನು‌ ಹೇಳ್ತಾರೆ? ಅವರದನ್ನ ಮೊದಲು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ್ ತಿರುಗೇಟು ನೀಡಿದ್ದಾರೆ.

Exit mobile version