Site icon PowerTV

ಹೈಕಮಾಂಡ್ ತೋರಿಸದವ್ರಿಗೆ ತಾಳಿ ಕಟ್ಟು ಅಂದ್ರು ಕಟ್ತೀನಿ: ಕೆ.ಎಸ್. ಈಶ್ವರಪ್ಪ

ಬೆಂಗಳೂರು:  ಯಡಿಯೂರಪ್ಪನವರ ವಿಶೇಷತೆ ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅನೇಕ ಬಾರಿ ಅವರ ಜೊತೆ ಇದ್ದೆ. ಅವರು ತೆಗೆದುಕೊಂಡಿದ್ದು ಸ್ಪಾಟ್ ಡಿಶೀಷನ್. 1989ರಿಂದ ನಾನು ಅವರನ್ನ ನೋಡಿದ್ದೇನೆ. ಸಣ್ಣವರು ಕೇಳ್ತಿರಲಿಲ್ಲ, ರಿಸಲ್ಟ್ ಬಂದ ನಂತರ ನಮಗೆ ಗೊತ್ತಾಗ್ತಿತ್ತು ಎಂದು ಬಿಎಸ್​​ವೈ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದರು.

ಇನ್ನು ಕುಟುಂಬ ರಾಜಕಾರಣ ಮಾಡದವರು ಯಾರಿಲ್ಲ.? ನೆಹರು ಅವರಿಂದ ಹಿಡಿದು ಇಲ್ಲಿವರೆಗೂ ನೋಡಿದ್ದೇವೆ. ರಾಜೀವ್, ಇಂದಿರಾ, ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಬಳಿಕ ಯಾವ ಪಾಪು ಗಾಂಧಿ ಬರ್ತಾರೋ ಗೊತ್ತಿಲ್ಲ. ದೇವೇಗೌಡರ ಕುಟುಂಬ ಕೂಡ ಇದೆ ಎಂದರು.

ಬಾದಾಮಿ ಯಾಕೆ ಗೆದ್ರಿ, ಈಗ ಯಾಕೆ ಬಾದಾಮಿ ಬಿಡ್ತಿದ್ದೀರಾ.? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂಗಳು ಎಲ್ಲಿ ಜಾಸ್ತಿ ಇದ್ದಾರೆ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ. ಚಾಮರಾಜಪೇಟೆ ಹೋಗ್ತಿದ್ದಾರೆ, ಜಮೀರ್ ಕಾಲ್ ಹಿಡೀತಿದ್ದಾರೆ ಅಪ್ಪಾ ಗೆಲ್ಸು ಅಂತ. ಅವರನ್ನ ನನ್ನ ಕ್ಷೇತ್ರಕ್ಕೆ ಬನ್ನಿ ಸಾರ್ ಅಂತಿದ್ದಾರೆ ಬಾಲಂಗೋಚಿಗಳು. ಹೋಗಿ ತಮ್ಮ ಕ್ಷೇತ್ರದಲ್ಲಿ ತಪ್ಪಾಯ್ತು ಅಂತ ಯಾಕೆ ಕೇಳ್ತಿಲ್ಲ? ಕೇರಳದ ವಯನಾಡು ರಾಹುಲ್ ಗಾಂಧಿಗೆ, ಕರ್ನಾಟಕದ ಚಾಮರಾಜಪೇಟೆ ಸಿದ್ದರಾಮಯ್ಯಗೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ನಾನು ಈವರೆಗೂ ಇಂತದ್ದೇ ಮಾಡಿಕೊಡಿ ಎಂದು ಹೈಕಮಾಂಡ್ ಬಳಿ ಕೇಳಿಲ್ಲ. ಏನು ಹೇಳಿದ್ರೂ ನಾನು ಮಾಡಲು ಸಿದ್ದ. ಇಂತವರಿಗೇ ತಾಳಿ ಕಟ್ಟು ಅಂದ್ರು ಕಟ್ತೀನಿ ಅಷ್ಟೇ. ಸಂಪುಟಕ್ಕೆ ಸೇರಿಸಿಕೊಳ್ಳಿ ಅಂತ ನಾನು ಈವರೆಗೂ ಸಿಎಂ ಬಳಿ ಹೋಗಿ ಕೇಳಿಲ್ಲ ಎಂದು ಈಶ್ವರಪ್ಪ ಹೇಳಿದರು.

Exit mobile version