Site icon PowerTV

ಕೋಲಾರದಲ್ಲಿ ಡ್ರಗ್ಸ್ ಮಾಫಿಯಾ ಪತ್ತೆ

ಕೋಲಾರ : ಮಾದಕ ವಸ್ತುಗಳನ್ನು ತಯಾರಿಸುತಿದ್ದ ಮನೆ ಮೇಲೆ ಕೋಲಾರ ಪೊಲೀಸರ ಏಕಾಏಕಿ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿರೋ ಘಟನೆ ಮುಳಬಾಗಿಲು ಪಟ್ಟಣದಲ್ಲಿ ನಡೆದಿದೆ.

ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಮಾದಕ ದ್ರವ್ಯ ಮಾತ್ರೆಗಳನ್ನು ತಯಾರಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿ ಮೇರೆಗೆ ಕೋಲಾರ ಪೊಲೀಸರು ಏಕಾಏಕಿ ದಾಳಿ ನಡೆಸಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ದಾಳಿ ವೇಳೆ ರಮೇಶ್ ಮತ್ತು ಫಯಾಸ್ ಅನ್ನೋ ಇಬ್ಬರು ಕಿಂಗ್ ಫಿನ್‌ಗಳು ಪರಾರಿಯಾಗಿದ್ದಾರೆ. ಇನ್ನು ದಾಳಿ ವೇಳೆ 40 ಕೆಜಿ ಎಪಿಡಿಸಿವೆಂಟ್ ಹೆಸರಿನ ರಾಸಾಯನಿಕ, ಕ್ಲೋರೋಫಾಮ್, ಕಚ್ಚಾ ದ್ರವ್ಯಗಳು ಸೇರಿದಂತೆ ಮಾದಕ ಮಾತ್ರೆ ತಯಾರಿಸುವ ಯಂತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪರಾರಿಯಾದ ಇಬ್ಬರು ಕಿಂಗ್ ಪಿನ್ ಆರೋಪಿಗಳು ಹಲವು ರಾಜ್ಯಗಳಿಗೆ ಮಾದಕ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಪರಾರಿಯಾದ ಇಬ್ಬರ ಬಗ್ಗೆ ಕೋಲಾರ ಪೋಲೀಸರು ಚೆನೈ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೆ ವಾಂಟೆಡ್ ಲಿಸ್ಟ್ ನೀಡಿದ್ದಾರೆ. ಈ ಘಟನೆ ಕುರಿತು ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version