Site icon PowerTV

ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

ಕಾರವಾರ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಉತ್ತರಕನ್ನಡ ಜಿಲ್ಲೆ ಹಳಿಯಾಳ ಮೂಲದ ಜ್ಯೋತಿ ಸುರೇಶ ಅಂತ್ರೋಳಕರ ಮತ್ತು ರಿಕೇಶ್​ ಸುರೇಶ ಮಿರಾಶಿ ಮೃತ ದುರ್ದೈವಿಗಳು. ಇವರಿಬ್ಬರೂ ಹಳಿಯಾಳದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು. ತಿಂಗಳ ಹಿಂದೆ ಯುವತಿಯ ಪಾಲಕರು ಈಕೆಗೆ ಬೇರೊಬ್ಬ ಯುವಕನ ಜತೆ ಮದುವೆ ಮಾಡಿದ್ದರು.

ಇನ್ನು ಪ್ರಿಯಕರನನ್ನು ಬಿಟ್ಟು ಬದುಕಲಾಗದೆ ಜ್ಯೋತಿ, ಜುಲೈ 15ರಂದು ಮುಂಡಗೋಡು ರಸ್ತೆಯಲ್ಲಿ ಪ್ರಿಯಕರ ರಿಕೇಶ್​ ಜತೆ ವಿಷ ಸೇವಿಸಿದ್ದಳು. ತೀವ್ರ ಅಸ್ವಸ್ಥಗೊಂಡ ಪ್ರೇಮಿಗಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನ ಸಾವು-ಬದುಕಿನ ನಡುವೆ ಹೋರಾಡಿದ ಪ್ರೇಮಿಗಳು ದುರಂತ ಅಂತ್ಯಕಂಡಿದ್ದಾರೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version