Site icon PowerTV

ನನಗೆ ರಾಜಕುಮಾರ ಟಾಕಳೆಯಿಂದ ಅನ್ಯಾಯ : ನವ್ಯಶ್ರೀ

ಬೆಳಗಾವಿ: ‘ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ರಾಜಕುಮಾರ ಟಾಕಳೆ ನನ್ನ ಗಂಡ’ ಎಂದು ಚನ್ನಪಟ್ಟಣದ ನವ್ಯಶ್ರೀ ಆರ್. ರಾವ್ ಪ್ರತಿಕ್ರಿಯಿಸಿದರು.

ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ದೂರು ನೀಡಿದ ಕಾರಣ, ಮಂಗಳವಾರ ಬೆಳಗಾವಿಗೆ ಧಾವಿಸಿದ ನವ್ಯಶ್ರೀ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.

‘ನಾನು 15 ದಿನಗಳಿಂದ ವಿದೇಶ ಪ್ರವಾಸದಲ್ಲಿದ್ದೆ. ಮಂಗಳವಾರ ಬೆಳಿಗ್ಗೆ ಮರಳಿದ್ದೇನೆ. ನಾನು ವಿದೇಶಿ ಪ್ರವಾಸದಲ್ಲಿದ್ದಾಗ ಅಶ್ಲೀಲ ವಿಡಿಯೊ ಹರಿಬಿಡಲಾಗಿದೆ. ರಾಜಕುಮಾರ ಟಾಕಳೆ ಜೊತೆಗಿನ ನನ್ನ ಅಶ್ಲೀಲ ವಿಡಿಯೊ ವೈರಲ್ ಮಾಡಲಾಗಿದೆ. ಆದರೆ, ರಾಜಕುಮಾರ ಟಾಕಳೆ ನನ್ನ ಗಂಡ. ಇಬ್ಬರೂ ಮದುವೆ ಆಗಿದ್ದೇವೆ’ ಎಂದೂ ಹೇಳಿದರು.

‘ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ನನಗೆ ಮೋಸ ಮಾಡಿ ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ. ನಾನು ಅತ್ಯಾಚಾರ ಮಾಡಿದ ಬೆದರಿಕೆ ಒಡ್ಡಿಲ್ಲ. ಅವರು ನನ್ನ ಗಂಡ. ಮೋಸ ಮಾಡಿದ ಬಗ್ಗೆ ಬೆಳಗಾವಿ ನಗರ ಪೊಲೀಸರ್ ಕಮಿಷನರ್ ಅವರಿಗೆ ದೂರು ನೀಡಲು ಬಂದಿದ್ದೇನೆ. ಬಳಿಕ ಎಲ್ಲ ಸಂಗತಿಗಳನ್ನು ಮಾಧ್ಯಮಗಳ ಮುಂದೆಯೂ ಇಡುತ್ತೇನೆ’ ಎಂದರು.

ಬೆಳಗಾವಿ ಹೋಟೆಲ್‌‌ನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಹೇಳಿಕೆ ನೀಡಿದ ಬಳಿಕ ನಿರ್ಗಮಿಸಿದ ನವ್ಯಶ್ರೀ ಅಜ್ಞಾತ ಸ್ಥಳಕ್ಕೆ ಹೋದರು. ಮಧ್ಯಾಹ್ನದವರೆಗೂ ಕಮಿಷನರ್ ಕಚೇರಿಯಲ್ಲಿ ಅವರ ಯಾವುದೇ ದೂರು ದಾಖಲಾಗಿಲ್ಲ.

Exit mobile version