Site icon PowerTV

ಡಿಕೆಶಿ ಸಿಎಂ ಆದ್ರೆ ತಪ್ಪೇನಿದೆ? : ಎಚ್ ಎಂ‌ ರೇವಣ್ಣ

ಬೆಂಗಳೂರು: ರಾಜಕೀಯದಲ್ಲಿ ಯಾರು ಕೂಡ ಸನ್ಯಾಸಿಗಳಲ್ಲ ಎಂದು ಮಾಜಿ ಸಚಿವ ಎಚ್ ಎಂ‌ ರೇವಣ್ಣ ಪ್ರತಿಕ್ರಿಯಿಸಿದರು.

ನಾನು ಸಿಎಂ ಆಗಬೇಕೆಂಬ ಎಂಬ ಡಿ ಕೆ ಶಿವಕುಮಾರ್​​ ಹೇಳಿಕೆ ವಿಚಾರಕ್ಕೆ ಕುರಿತು ಪವರ್ ಟಿವಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರು ಕೂಡ ಸನ್ಯಾಸಿಗಳಲ್ಲ. ಪ್ರತಿಯೊಬ್ಬರಿಗೂ ಆಸೆ ಇದ್ದೆ ಇರುತ್ತದೆ. ಎಸ್ ಎಂ ಕೃಷ್ಣ ಆದ ಬಳಿಕ ನನ್ನ ಪರ ಒಕ್ಕಲಿಗ ಸಮಾಜ ಇರಬೇಕೆಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಹೇಳಿದರು.

ಅಲ್ಲದೇ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಆರ್ ವಿ ದೇಶಪಾಂಡೆ, ಪರಮೇಶ್ವರ್ ಹೀಗೆ ಸಾಕಷ್ಟು ಜನ ಹಿರಿಯ ನಾಯಕರು ಇದ್ದಾರೆ
ಆರೇಳು ಬಾರಿ ಗೆದ್ದವರು ಇದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದರು.

Exit mobile version