Site icon PowerTV

ಅಚ್ಚೇದಿನ ಅಂತ ಹೇಳಿ ಜನರ ರಕ್ತ ಕುಡಿಯುತ್ತಿದ್ದಾರೆ : ಸಿದ್ದರಾಮಯ್ಯ

ಬೆಂಗಳೂರು : ಬೆಲೆ ಏರಿಕೆ ಮಾಡಿ ಅಚ್ಚೇದಿನ ಅಂತ ಹೇಳಿ ಜನರ ರಕ್ತ ಕುಡಿಯುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಅಚ್ಛೇ ದಿನ ಬರುತ್ತೆ ಎಂದು ಹೇಳಿದ್ದರು. ದೇಶದ ಜನರಿಗೆ ಭ್ರಮಯನ್ನ ಹುಟ್ಟಿಸಿದ್ರು. ಎಂಟು ವರ್ಷಗಳನ್ನ ಮೋದಿಯವರು ಪೂರೈಸಿದ್ದಾರೆ. ದೇಶದಲ್ಲಿ ಎಲ್ಲ ಕಡೆ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ ಎಂದು ವ್ಯಂಗವಾಡಿದರು.

ಇನ್ನು, ರಾಜ್ಯದಿಂದ ೧೯ ಲಕ್ಷ ಕೋಟಿ ಸಂಗ್ರಹವಾಗಿದೆ. ಮಹಾರಾಷ್ಟ್ರ ನಂತರ ಕರ್ನಾಟಕವೇ ಅತೀ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕರ್ನಾಟಕದಿಂದ ೧೯ ಲಕ್ಷ ಕೋಟಿ ತೆಗದುಕೊಂಡು ರಾಜ್ಯಕ್ಕೆ ಒಂದು ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಜಾಹೀರಾತು ಕೊಟ್ಟಿದ್ದಾರೆ. ೧೯ ಲಕ್ಷದಲ್ಲಿ ೮ ಲಕ್ಷ ಕೋಟಿ ರಾಜ್ಯಕ್ಕೆ ನೀಡಬೇಕಿತ್ತು. ಇವರು ರಾಜ್ಯದ ಜನರಿಹೆ ದ್ರೋಹ ಎಸಗೆದಿದ್ದಾರೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರು.

ಅದಲ್ಲದೇ, ಯುಪಿಎ ಸರ್ಕಾರದಲ್ಲಿ ೪೬ ರೂಪಾಯಿ ಇದ್ದ ಡೀಸೆಲ್ ಬೆಲೆ ೯೦ ರೂಪಾಯಿ ಆಗಿದೆ. ಪೆಟ್ರೋಲ್, ಗ್ಯಾಸ್,ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಅಚ್ಚೇದಿನ ಅಂತ ಹೇಳಿ ಜನರ ರಕ್ತ ಕುಡಿಯುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗವಾಡಿದ್ದಾರೆ.

Exit mobile version