Site icon PowerTV

ಪ್ರೀತಿ ವಿಚಾರಕ್ಕೆ ಯುವಕನ ಹತ್ಯೆ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಪ್ರೀತಿ-ಪ್ರೇಮ ವಿಚಾರಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕನ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ಆರೋಪಿಗಳನ್ನ ನಾಗೇಂದ್ರ ಹಾಗೂ ರಂಗಸ್ವಾಮಿ ಎಂದು ಗುರುತಿಸಲಾಗಿದೆ. ಜುಲೈ 15 ರಾತ್ರಿ ಹಳೇ ಮದ್ರಾಸ್‌ ರಸ್ತೆಯ ನಿರ್ಜನ ಪ್ರದೇಶದಲ್ಲಿ 18 ವರ್ಷದ ಪ್ರಜ್ವಲ್‌ ಎಂಬುವವನ ಮೇಲೆ ದೊಣ್ಣೆಯಿಂದ ಗಂಭೀರವಾಗಿ ಹಲ್ಲೆ ಮಾಡಿದ್ರು. ಹೀಗೆ ಹಲ್ಲೆಗೊಳಗಾದ ಪ್ರಜ್ವಲ್‌ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್‌ ಆಸ್ಪತ್ರೇಯಲ್ಲೇ ಪ್ರಾಣ ಬಿಟ್ಟಿದ್ದ. ಇನ್ನು ಮೃತ ಪ್ರಜ್ವಲ್‌ ಆರೋಪಿ ನಾಗೇಂದ್ರ ಅಣ್ಣನ ಮಗಳನ್ನ ಪ್ರೀತಿಸುತ್ತಿದ್ನಂತೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಲವ್‌ ಯೂ ಅಂತ ಮಸೇಜ್‌ ಬೇರೆ ಕಳುಹಿಸಿದ್ದ. ಹೀಗಾಗಿ ಪ್ರಜ್ವಲ್‌ಗೆ ವಾರ್ನಿಂಗ್‌ ಕೊಡುವ ಸಲುವಾಗಿ ಮತ್ತೋರ್ವ ಯುವಕನ ಸಹಾಯದ ಮೂಲಕ ತಾವಿದ್ದ ಸ್ಥಳಕ್ಕೆ ಆರೋಪಿಗಳು ಕರೆಸಿಕೊಂಡಿದ್ರು.

ಹೀಗೆ ಮಾತಿಗೆ ಮಾತು ಬೆಳೆದು ಪ್ರಜ್ವಲ್‌ ಹಾಗೂ ಕರೆತಂದವನಿಗೂ ನಾಗೇಂದ್ರ ಹಾಗೂ ರಂಗಸ್ವಾಮಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇನ್ನು ಪ್ರಜ್ವಲ್‌ ಸಾವನ್ನಪ್ಪಿದ್ದ ಹಿನ್ನೆಲೆ ಇಬ್ಬರು ಆರೋಪಿಗಳನ್ನ ಬೈಯಪ್ಪನ್ನಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Exit mobile version