Site icon PowerTV

ಮಾವಿನ ಹಣ್ಣು ತಿನ್ನುವುದರಿಂದ ಏನೆಲ್ಲಾ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ?

ಹಣ್ಣಿನ ರಾಜ ಎನ್ನುವ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ. ಚಿಕ್ಕವರಿಂದ  ದೊಡ್ಡವರಿಗೂ ಸಹ ಮಾವಿನಹಣ್ಣು ಎಂದರೆ  ಇಷ್ಟ. ಬೇಸಿಗೆಕಾಲ ಬಂತೆಂದರೆ ಮಾವಿನ ಸುಗ್ಗಿ ಎಂದೇ ಹೇಳಬಹುದು. ಮಾವಿನ ಹಣ್ಣಿನಲ್ಲಿ ಆರೋಗ್ಯಕ್ಕೆ ಸಹಾಯಕವಾಗುವ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ವಿಟಮಿನ್ ಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದುಪ್ಪಟ್ಟು ಮಾಡಲು ಸಹಾಯಕವಾಗುತ್ತೆ. ಇದರ ಜೊತೆಗೆ ಈ ಹಣ್ಣು ರೋಗ ನಿರೋಧಕವಾಗಿಯೂ ಕೆಲಸ ನಿರ್ವಹಿಸುತ್ತದೆ.

ಸಾಮಾನ್ಯವಾಗಿ ಈ ಹಣ್ಣನ್ನು ಊಟದ ನಂತರ ಸೇವನೆ ಮಾಡುತ್ತಾರೆ. ಮಾವು  ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.

ವಿಟಮಿನ್ ಎ ಇರುವುದರಿಂದ ಕಣ್ಣಿನ ರಕ್ಷಣೆಗೂ ಸಹಾಯಕವಾಗುತ್ತದೆ.

ಮಾನಿವ ಹಣ್ಣು ತಿನ್ನುವುದರಿಂದ ಹಸಿವನ್ನು ಸಹ ನಿಯಂತ್ರಿಸುತ್ತದೆ.

ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಫೈಬರ್ ಇರುವ ಆಹಾರ ಉತ್ತಮ.

ಮಾವಿನಹಣ್ಣಿನಲ್ಲಿ ಅತೀ ಹೆಚ್ಚು ಪೈಬರ್ ಅಂಶ ಇರುತ್ತದೆ.

ಇದರಲ್ಲಿ ಗ್ಲುಟೋಮಿನ್ ಅಂಶವೂ ಇರುವುದರಿಂದ ನಮ್ಮ ಜ್ಞಾಪಕ ಶಕ್ತಿಯೂ ಸಹ ಹೆಚ್ಚಾಗುತ್ತದೆ. ಇನ್ನೂ ಅನೇಕ ಉತ್ತಮ ಅಂಶಗಳಿರುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾವುದೇ ಆಹಾರ  ಆಗಲೀ ಅಥವಾ ಹಣ್ಣುಗಳಾಗಲೀ  ಒಳ್ಳೆಯದು ಎಂದ ಮಾತ್ರಕ್ಕೆ  ಅತಿಯಾಗಿ ತಿನ್ನಬಾರದು.  ಅತೀಯಾದರೆ ಆಹಾರದಲ್ಲಿ ಏರುಪೇರಾಗುವ ಸಾಧ್ಯತೆ ಕೂಡ ಇದೆ.

Exit mobile version