Site icon PowerTV

ಬೆಲೆ ಏರಿಕೆಯನ್ನ‌ ಸಮರ್ಥಿಸಿಕೊಂಡ ಮಾಜಿ ಸಚಿವ ಈಶ್ವರಪ್ಪ

ಬೆಂಗಳೂರು : ಕೇಂದ್ರ ಸರ್ಕಾರದಿಂದ ಮೊಸರು ಮಜ್ಜೆ ಮತ್ತು ಲಸ್ಸಿ ಹೀಗೆ ದಿನನಿತ್ಯದ ಆಹಾರದ ಬೆಲೆ ಏರಿಕೆಯನ್ನ‌ ಮಾಜಿ ಸಚಿವ ಈಶ್ವರಪ್ಪ ಅವರು ಸಮರ್ಥಿಸಿಕೊಂಡಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ನಡೆಸೋರು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಇರಬಹುದು. ಆಯಾ ಪದ್ದತಿ ಪ್ರಕಾರ ನಿಜಕ್ಕೂ ಸರ್ಕಾರ ಗಮನ ಹರಿಸುತ್ತದೆ. ವಿಧಿ ಇಲ್ಲದೇ ಇರೋ ಸಂದರ್ಭಗಳಲ್ಲಿ ಬೆಲೆ ಏರಿಕೆ ಮಾಡಲೇಬೇಕು ಎಂದರು.

ಅಲ್ಲದೇ ಕೆಲವು ಸಂದರ್ಭದಲ್ಲಿ ಬೆಲೆಗಳನ್ನು ಇಳಿಸಿರುವುದು ಸಹ ಇದೆ. ಇದನ್ನ ವಿಪಕ್ಷಗಳು ಒಪ್ಪೋದಿಲ್ಲ, ಕೇವಲ ಬೆಲೆ ಏರಿಕೆ ಮಾಡಿದಾಗ ಮಾತ್ರ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಇದು ಸ್ವಭಾವಿಕ ಇದರ ಬಗ್ಗೆ ಟೀಕೆ‌ ಮಾಡೋದು ಸರಿಯಲ್ಲ ಎಂದು ತಮ್ಮ ಸರ್ಕಾರದ ನಿರ್ಧಾರವನನ್ನು ಸಮರ್ಥಿಸಿಕೊಂಡರು.

Exit mobile version