Site icon PowerTV

ಸಿ.ಟಿ ರವಿ ಫ್ಲೆಕ್ಸ್ ಹರಿದು ಕಾಂಗ್ರೆಸ್​​ ಕಾರ್ಯಕರ್ತೆ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ವಿಧಾನಸೌಧದ ಮುಂಭಾಗದಲ್ಲಿ ಹಾಕಿದ್ದ ಸಿ.ಟಿ ರವಿ ಫ್ಲೆಕ್ಸ್ ಹರಿದು ಬಿಸಾಕಿದ ಘಟನೆ ನಡೆದಿದೆ.

ಇಂದು (ಜು.18) ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ, ಮಾಜಿ ಸಚಿವರಾದ ಸಿ.ಟಿ ರವಿಯವರ ಜನ್ಮ ದಿನದ ಪ್ರಯುಕ್ತ ನಗರದ ವಿಧಾನಸೌಧದ ಮುಂಭಾಗದಲ್ಲಿ ಮಂಡ್ಯದ ಕಿಶನ್ ಗೌಡ ಎಂಬ ಬಿಜೆಪಿ ಮುಖಂಡ ಫ್ಲೆಕ್ಸ್ ಅಳವಡಿಸಿದ್ದ ಹುಟ್ಟುಹಬ್ಬ ಶುಭಾಶಯ ಕೋರಿದ್ದರು.

ಆದರೆ, ಬಿಂದು ಎಂಬ ಕಾಂಗ್ರೆಸ್ ಕಾರ್ಯಕರ್ತೆಯಿಂದ ಫ್ಲೆಕ್ಸ್ ತೆರವು ಮಾಡಿ ಹರಿದು ಬಿಸಾಕಿ ಆಕ್ರೋಶ ಹೊರಹಾಕಿದ್ದಾರೆ. ಹಾಗೂ ಅನಧೀಕೃತ ಫ್ಲೆಕ್ಸ್​​ ಅಳವಡಿಕೆಗೆ ಜನಾಕ್ರೋಶ ತೋರ್ಪಡಿಸಿದ್ದಾರೆ.

Exit mobile version