Site icon PowerTV

ಹಾಲ್ನೊರೆಯಂತೆ ಉಕ್ಕಿದ ಅಕ್ಕತಂಗಿ ಜಲಪಾತ

ಬಾಗಲಕೋಟೆ : ರಾಜ್ಯದಲ್ಲಿ ನಿತಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪಾತದಲ್ಲಿ ನೀರು ಭೋರ್ಗರೆಯುತ್ತಿದೆ.

ನಿರಂತರ ಮಳೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಬೆಟ್ಟಗಳ ಮಧ್ಯೆ ಕಿರು ಜಲಪಾತವೊಂದು ಕಂಗೊಳಿಸಿದೆ. ಬಾದಾಮಿಯ ಅಕ್ಕ-ತಂಗಿ ಕಿರುಜಲಪಾತ ಹಾಲ್ನೊರೆಯಂತೆ ಕಂಡು ಬಂದಿದೆ. ನೋಡುಗರ ಮನಸೂರೆಗೊಳ್ಳುವಂತೆ ಮಾಡ್ತಿದೆ. ದೇಗುಲದ ಜೊತೆಯಲ್ಲಿಯೇ ಕಿರು ಜಲಪಾತ ಕಣ್ಮನ ಸೆಳೆಯುತ್ತಿದೆ.

ಕಿರು ಜಲಪಾತ ನೋಡಲು ಜನರು ಆಗಮಿಸುತ್ತಿದ್ದಾರೆ. ಮಳೆ ನಡುವೆ ಪ್ರಕೃತಿ ಸೌಂದರ್ಯ ಹೆಚ್ಚಿಸಿರೋ ಅಕ್ಕ ತಂಗಿ ಕಿರು ಜಲಪಾತದಿಂದ ಅಗಸ್ತ್ಯ ತೀರ್ಥ ಕೆರೆಯು ತುಂಬಿ ಹರಿಯುತ್ತಿದೆ. ಬದಾಮಿ ಚಾಲುಕ್ಯರ ಆಡಳಿತದ ಸಮಯದಲ್ಲಿ ಇರುವ ಸ್ಮಾರಕಗಳ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರ ಮನ ಸೆಳೆಯುತ್ತಿದೆ.

Exit mobile version