Site icon PowerTV

ಮೈಸೂರು ವಿವಿಯಲ್ಲಿ ಭಾರಿ ಗೋಲ್ ಮಾಲ್.?

ಮೈಸೂರು: ವಿಶ್ವವಿದ್ಯಾಲಯದ ಉದ್ಯೋಗಿಗಳ 75 ಕೋಟಿ ಎಲ್ ಐಸಿ ಠೇವಣಿ ಹಣ ಡ್ರಾ. ಮಾಡಿ ವಿವಿ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ.

ನಗರದಲ್ಲಿ ವಿವಿ ಸಿಬ್ಬಂದಿ ಗ್ರ್ಯಾಜುಟಿ ಫಂಡ್ ದುರ್ಬಳಕೆ ಆರೋಪದ ಹಿನ್ನಲೆಯಲ್ಲಿ ಕೆಲಸ ಮಾಡದೆಯೇ ಕೋಟಿ ಕೋಟಿ ಲೂಟಿ ಮಾಡಿದ್ದು, ಕಾನೂನು ಬಾಹಿರವಾಗಿ ಹಣ ಡ್ರಾ ಮಾಡಿರೋ ಆರೋಪ ವ್ಯಕ್ತವಾಗಿದೆ. ವಿವಿ ಕುಲಪತಿ ಹೇಮಂತ್ ಕುಮಾರ್, ರಿಜಿಸ್ಟರ್ ಶಿವಪ್ಪ,‌ಫೈನಾನ್ಸ್ ಆಫಿಸರ್ ಟಿ.ದೇವರಾಜ್, ಪ್ರೊ, ಮಂಜುನಾಥ್, ಪ್ರೊ,ಸುರೇಶ್, ಎಇ ಶಿವಲಿಂಗ ಪ್ರಸಾದ್, ಸ್ಪೆಷಲ್ ಆಫಿಸರ್ ಚೇತನ್ ವಿರುದ್ಧ ದೂರು ದಾಖಲಾಗಿದೆ.

25 ಪ್ರೋಗ್ರಾಂ ಮಾಡಲು 55 ಕೋಟಿ ಬಳಕೆ ಮಾಡಿದ್ದು, ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ.ಮಹದೇವ್ ರಿಂದ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಕ್ರಮ ಕೈಗೊಳುವಂತೆ ಡಾ. ಕೆ.ಮಹದೇವ್ ಒತ್ತಾಯ ಮಾಡಿದ್ದಾರೆ.

Exit mobile version