Site icon PowerTV

ಶೃಂಗೇರಿ-ಆಗುಂಬೆ -ತೀರ್ಥಹಳ್ಳಿ ರೂಟ್​ನಲ್ಲಿ ರಸ್ತೆ ಕುಸಿತದಿಂದ ಸಂಪರ್ಕ ಕಡಿತ

ಶಿವಮೊಗ್ಗ : ಶೃಂಗೇರಿ-ಆಗುಂಬೆ -ತೀರ್ಥಹಳ್ಳಿ ರೂಟ್​ನಲ್ಲಿ ರಸ್ತೆ ಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದು, ಸ್ಥಳಿಯರು ಆತಂಕಕ್ಕೊಳಗಾಗಿದ್ದಾರೆ.

ಕಳೆದ ಭಾನುವಾರ ಧರೆ ಕುಸಿದಿದ್ದ ಜಾಗದಲ್ಲೇ ಮತ್ತೆ ರಸ್ತೆ ಬಿರುಕುಗೊಂಡಿದ್ದು, ಕಳೆದ ಮೂರು ದಿನಗಳ ಹಿಂದೆಯಷ್ಟೇ, ವಾಹನ ಸಂಚಾರಕ್ಕೆಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಹೀಗಾಗಿ ರಸ್ತೆ ಬಿರುಕಿನಿಂದ ಸ್ಥಳಿಯರು ಆತಂಕಕ್ಕೊಳಗಾಗಿದ್ದಾರೆ.

ಇನ್ನು, ಆಗುಂಬೆ ಘಾಟಿ ಬಂದ್ ಆಗುವ ಎಲ್ಲಾ ಲಕ್ಷಣಗಳು ಗೋಚರವಾಗಿದ್ದು, ಶಿವಮೊಗ್ಗ-ಮಣಿಪಾಲ್ – ಉಡುಪಿ – ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ಧಾರಿಯಾಗಿದ್ದು, ಈ ಘಾಟಿ ರಸ್ತೆ ಬಂದ್ ಆದರೆ, ಮಣಿಪಾಲ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ತೊಂದರೆ ಉಂಟಾಗುತ್ತದೆ. ಭಾರೀ ಮಳೆಯಿಂದಾಗಿ ಸುಮಾರು 200 ಅಡಿಗಳಷ್ಟು ರಸ್ತೆ ಕುಸಿದಿದೆ.

Exit mobile version