Site icon PowerTV

ಕೊವಿಡ್ ಹಾವಳಿ ಬಳಿಕ ಶಾಲೆಗಳಲ್ಲಿ ಮಕ್ಕಳಿಗೆ ಕಾಡುತ್ತಿದೆ ಹೊಸ ಡಿಸೀಸ್

ಬೆಂಗಳೂರು : ಕೊವಿಡ್ ಹಾವಳಿ ಬಳಿಕ ಶಾಲೆಗಳಲ್ಲಿ ಮಕ್ಕಳಿಂದ ಮಕ್ಕಳಿಗೆ ಹರಡುತ್ತಿರುವ ಡಿಸೀಸ್ ನಿಂದ ಕಂಗಾಲಾದ ಪೋಷಕರು ಕಂಗಾಲಾಗಿದ್ದಾರೆ.

ನಗರದ ಶಾಲೆಗಳಲ್ಲಿ ಏರಿಕೆಯಾಗುತ್ತಿದೆ ಕೈ, ಕಾಲು ಮತ್ತು ಬಾಯಿ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೈ ಹಾಗೂ ಬಾಯಿ ಸುತ್ತಮುತ್ತ ಮಕ್ಕಳಿಗೆ ಗುಳ್ಳೆಗಳ ಕಾಣಿಸಿಕೊಳ್ಳುತ್ತಿದೆ. ಗುಳ್ಳೆಗಳು ಹಾಗೂ ಗಾಯಗಳಿಂದ ಮಕ್ಕಳಿಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ. ಆದರೆ ಕೊವಿಡ್ ಹಾವಳಿ ಕಡಿಮೆಯಾಯ್ತು ಅಂತಾ ನಿರಾಳವಾಗಿದ್ದ ಪೋಷಕರಿಗೆ ಹೊಸ ವೈರಲ್ ಡಿಸೀಸ್ ಕಾಟ ಶುರುವಾಗಿದೆ.

ಇನ್ನು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಿಕ್ಕ ಮಕ್ಕಳ ಮೇಲೆ ಹೆಚ್ಚಾಗಿ ಕಾಣುತ್ತಿದೆ ಹೆಮ್ಮಾರಿ. ಇದು ಮಕ್ಕಳಿಂದ ಮಕ್ಕಳಿಗೆ ಹರಡುತ್ತಿದ್ದು ಹೆಚ್ಚು ಪೋಷಕರ ಆತಂಕಕ್ಕೆ ಕಾರಣವಾಗಿದ್ದು, ಮುಂಗಾರು ಮಳೆಯ ಆರ್ಬಟ ಮತ್ತು ಬೆಂಗಳೂರಿನಲ್ಲಿ ಹಠಾತ್ ಹವಾಮಾನ ಬದಲಾವಣೆ ಸೋಂಕುಗಳ ಉಲ್ಬಣಕ್ಕೆ ಕಾರಣವಾಗಿದೆ. ಕೈ, ಕಾಲು ಮತ್ತು ಬಾಯಿ ರೋಗ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಲ್ಲಿ ಹೆಚ್ಚುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗ ಪ್ರಕರಣಗಳ ಹಿನ್ನಲೆಯಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ರೋಗ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದ್ರೆ ಸೂಕ್ತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

Exit mobile version