Site icon PowerTV

ಪರಿಹಾರ ಧನವನ್ನೇ ವಾಪಾಸ್​ ಎಸೆದ ಮಹಿಳೆ

ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರ ಧನ ಹಣವನ್ನೇ ವಾಪಾಸ್​ ಎಸೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಸಿದ್ದು ಎದುರಲ್ಲೇ ನಡೆದ ಹೈಡ್ರಾಮಾ ನಡೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಗೆ ಆಗಮಿಸಿದ ವೇಳೆ ಗಾಯಾಳುಗಳ ಸಂಭಂದಿಗಳ ಆಕ್ರೋಶ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ನೀಡಿದ ಹಣವನ್ನೇ ಮರಳಿ ಸಿದ್ದರಾಮಯ್ಯಗೆ ನೀಡಲು ಮುಂದಾಗಿದ್ದಾರೆ. ಈ ವೇಳೆ ವಾಹನದಲ್ಲಿ ಸಿದ್ದು ತೆರಳುತ್ತಲೇ ಹಣ ಹಿಡಿದೇ ವಾಹನದ ಹಿಂದೆ ಹೊರಟಿದ್ದಾರೆ.

ಕೆರೂರ ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಆಗಮಿಸಿದ ಸಿದ್ದರಾಮಯ್ಯ. ನಗರದ ಆಶೀರ್ವಾದ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಇದೇ ವೇಳೆ ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನ ಭೇಟಿ ಮಾಡಿದ ಅವರು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸಿದ್ದರಾಮಯ್ಯ ಆಗಮಿಸಿದ ಹಿನ್ನೆಲೆ ಡಿಸಿ ಸುನೀಲಕುಮಾರ್, ಎಸ್.ಪಿ.ಜಯಪ್ರಕಾಶ್ ಉಪಸ್ಥಿತಿಯಲ್ಲಿದ್ದರು.

Exit mobile version