Site icon PowerTV

ಶೃಂಗೇರಿ-ಆಗುಂಬೆ ಸಂಪರ್ಕ ಕಡಿತ

ಚಿಕ್ಕಮಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರಿನಲ್ಲಿ ಭಾರಿ ವರ್ಷ ಧಾರೆಗೆ ರಾಜ್ಯ ಹೆದ್ದಾರಿಯೇ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಧಾರಾಕಾರ ಮಳೆಯಿಂದಾಗಿ ಚಿಕ್ಕಮಗಳೂರಿನ ಶೃಂಗೇರಿಯ ನೇರಳೆಕೊಡಿಗೆ ಬಳಿ ಹೆದ್ದಾರಿ ಕೊಚ್ಚಿ ಹೋಗಿದ್ದು, ಸಂಚಾರ ಮಾರ್ಗವೇ ಸಂಪೂರ್ಣ ಬಂದ್ ಆಗಿದೆ.100 ಅಡಿಗಳಷ್ಟು ರಸ್ತೆ ಕುಸಿದಿದ್ದು, ಮಾರ್ಗ ಮಧ್ಯೆಯೇ ರಸ್ತೆ ಬಾವಿಯಂತಾಗಿದೆ.

ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿರುವುದರಿಂದ ಶೃಂಗೇರಿ ಹಾಗೂ ಆಗುಂಬೆ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಚಿಕ್ಕಮಗಳೂರಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಮನೆಗಳ ಮೇಲ್ಛಾವಣಿಗಳೇ ಹಾರಿ ಹೋಗಿವೆ.

Exit mobile version